ಫೆ.18ರಂದು ಎಸ್‍ಪಿಬಿ ಗಾನರಸಾಯನ ಸಂಗೀತ ಕಾರ್ಯಕ್ರಮ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.16:- ಗಾನ ಚಂದನ ಕಲಾ ಬಳಗದ ವತಿಯಿಂದ ಫೆ.18ರಂದು ಡಾ.ಎಸ್‍ಪಿಬಿ ಗಾನರಸಾಯನ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಸು?ಂದ್ರ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5ಕ್ಕೆ ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಎಲ್‍ಎನ್ ಕನ್ವೆಕ್ಷನ್ ಹಾಲ್‍ನ ಮಾಲೀಕ ದೇವಪ್ರಕಾಸ್ ಉದ್ಘಾಟಿಸುವರು.
ವಿದ್ಯಾ ವಿಕಾಸ ಸಂಸ್ಥೆಯ ಅಧ್ಯಕ್ಷ ವಿಕಾಸ್ ಗೌಡ, ನಗರಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಮುಂತಾದವರು ಪಾಲ್ಗೊಳ್ಳುವರು ಎಂದು ಹೇಳಿದರು.
ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕನ್ನಡದ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ನಡೆದು ಬಂದ ಹಾದಿಯನ್ನು ಸ್ಮರಿಸಲಾಗುವುದು ಎಂದು ವಿವರಿಸಿದರು.
ಕಲಾವಿದರಾದ ಗೋಪಾಲಕೃಷ್ಣ, ವಿಶ್ವನಾಥ ಶಾಸಿ, ಶಶಿಕಲಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.