ಫೆ.10ರಂದು ಜ್ಯೂ.ಅಮಿತಾಬ್ ಬಚ್ಚನ್ ಮಿಮಿಕ್ರಿ, ಸಂಗೀತ ಕಾರ್ಯಕ್ರಮ

ಕಲಬುರಗಿ:ಫೆ.07: ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಇರುವ ಕನ್ನಡ ಭವನದಲ್ಲಿ ಫೆಬ್ರವರಿ 10ರಂದು ಸಂಜೆ 4-30ಕ್ಕೆ ಎ.ಎಂ. ಗ್ರೂಪ್ ವತಿಯಿಂದ ಜ್ಯೂನಿಯರ್ ಬಚ್ಚನ್ ಅವರಿಂದ ಮಿಮಿಕ್ರಿ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ. ಮೊಹ್ಮದ್ ಅಲಿಮುದ್ದೀನ್, ಮಧು ಮಲ್ಲಾಬಾದಿ ಅವರು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಇಲಿಯಾಸ್ ಶೇಠ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮತ್ತು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಲಾಲ್ ಅಹ್ಮದ್ ಬಾಂಬೆ ಶೇಠ್, ಅಭಿಯಂತರ ಬಸವರಾಜ್ ಸದಲಾಪೂರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ ಅವರು ಆಗಮಿಸುವರು.
ಸಂಜೆ 4-30ರಿಂದ 5-30ರವರೆಗೆ ಚಿತ್ರಕಲಾ ಸ್ಪರ್ಧೆ ಜರುಗಲಿದೆ. ನಂತರ 5-30ರಿಂದ 6-30ರವರೆಗೆ ಮಿಮಿಕ್ರಿ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದ್ದಾರೆ.