ಫೆ. 1 ಕೇಂದ್ರ ಬಜೆಟ್ ಮಂಡನೆ

ನವದೆಹಲಿ, ಜ. ೧೪- ದೇಶದ ಆರ್ಥಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಸಕ್ತ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಫೆ. ೧ ರಂದು ಸಂಸತ್‌ನಲ್ಲಿ ಮಂಡಿಸಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ದೇಶವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ನಲುಗಿರುವ ಜನರ ಬದುಕು ಕಳೆದ ಕೆಲವು ತಿಂಗಳಿನಿಂದ ಸರಿದಾರಿಗೆ ಬರುತ್ತಿದ್ದಂತೆ, ಮತ್ತೆ ಅಪ್ಪಳಿಸಿದ ಸೋಂಕಿನ ಹಿನ್ನೆಲೆಯಲ್ಲಿ ನಿiಲಾ ಮಂಡಿಸುವ ಬಜೆಟ್ ಮಹತ್ವ ಪಡೆದುಕೊಂಡಿದೆ.
ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಜನರ ಕ್ಷೇಮಾಭ್ಯುದಯಕ್ಕೆ ಆದ್ಯತೆ ನೀಡಿ ಶ್ರೀಸಾಮಾನ್ಯನಿಗೆ ಹೆಚ್ಚಿನ ಹೊರೆಯಾಗದಂತೆ ಬಜೆಟ್ ಮಂಡಿಸಲು ಸಚಿವರು ತಯಾರಿನಡೆಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಆರ್ಥಿಕ ಪರಿಣಿತರು, ಉದ್ಯಮಿಗಳು ಹಾಗೂ ವಿವಿಧ ರಂಗಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸ್ಥಿತಿಗತಿ ಅರಿತಿರುವ ಸಚಿವೆ ನಿರ್ಮಲಾರವರು ಫೆ. ೧ ರಂದು ೧೧ ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಈಗಾಗಲೇ ಹಣಕಾಸು ಸಚಿವರು ಕೃಷಿ, ಕೈಗಾರಿಕೆ, ಇಂಧನ ಸೇರಿದಂತೆ ವಿವಿಧ ಇಲಾಖೆಗಳ ಜತೆ ಪೂರ್ವಭಾವಿ ಸಭೆ ನಡೆಸಿ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಜನಸ್ನೇಹಿ ಬಜೆಟ್ ಮಂಡಿಸುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿನ ೩ನೇ ಅಲೆ ಆರ್ಭಟಿಸಿದ್ದು, ದೇಶದ ಆರ್ಥಿಕ ಚೇತರಿಕೆಗೆ ಟಾನಿಕ್ ನೀಡುವ ಸಂಬಂಧ ಹತ್ತು ಹಲವು ಯೋಜನೆಗಳ ಕೊಡುಗೆ ನೀಡುವ ನಿರೀಕ್ಷೆ ಇದೆ.
ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೃಷಿ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲು ನಿರ್ಮಲಾ ಸೀತಾರಾಮನ್ ಮುಂದಾಗಿದ್ದಾರೆ. ದೇಶದಲ್ಲಿ ಏರಿಳಿತವಾಗುತ್ತಿರುವ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳಲಿದ್ದಾರೆ.
ಈ ಬಾರಿಯ ಮುಂಗಡ ಪತ್ರದಲ್ಲಿ ಮಧ್ಯಮ ಹಾಗೂ ಬಡವರ್ಗದವರನ್ನು ಗಣನೆಗೆ ತೆಗೆದುಕೊಂಡು ಬರಪೂರ ಯೋಜನೆಗಳನ್ನು ಪ್ರಕಟಿಸಲು ವಿತ್ತ ಸಚಿವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಇಲಾಖೆಗೂ ಕಾಯಕಲ್ಪ ನೀಡಲು ಚಿಂತನೆ ನಡೆಸಲಾಗಿದ್ದು, ರೈಲ್ವೆ ನಿಲ್ದಾನಗಳ ಮೇಲ್ದರ್ಜೆಗೇರಿಸುವುದು. ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲಿದ್ದಾರೆ.
ಬಜೆಟ್‌ನ್ನು ಅಧಾಯ ಮತ್ತು ಬಂಡವಾಲ ಬಜೆಟ್ ಎಂದು ವರ್ಗೀಕರಿಸಲಾಗಿದೆ. ಕೇಂದ್ರ ಸರ್ಕಾರ ದೈನಂದಿನ ಕಾರ್ಯಚಟುವಿಕೆಗೆ ಹಾಗೂ ನಾಗರಿಕರಿಗೆ ನೀಡಲಾಗುವ ವಿವಿಧ ಸೇವೆಗಳ ಮೇಲೆ ಮಾಡುವ ವೆಚ್ಚವಾಗಿದೆ.
ಆದಾಯ ಕೊರತೆಯ ತನ್ನ ದಿನ ನಿತ್ಯದ ವ್ಯವಹಾರಗಳನ್ನು ನಿರ್ವಹಿಸಲು ಸರ್ಕಾರದ ಜತೆಗೆ ಹಣದ ಕೊರತೆ ಗಾತ್ರ, ಬೆಳವಣಿಗೆ, ಬೆಲೆ ಸ್ಥಿರತೆ, ಉತ್ಪಾದನಾ ವೆಚ್ಚ ಮತ್ತು ಹಣ ದುಬ್ಬರವನ್ನು ಸೂಚಿಸುತ್ತದೆ.

ಜ. ೩೧ ರಿಂದ ಸಂಸತ್ ಅಧಿವೇಶನ
ಈ ತಿಂಗಳ ೩೧ ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ. ೧೧ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ದೇಶದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಸಂಪ್ರದಾಯದಂತೆ ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಗೊತ್ತು ಗುರಿಗಳನ್ನು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಅನಾವರಣ ಮಾಡಲಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ನಡುವೆಯೇ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಸಂಸತ್ತಿನ ೭೦೦ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.