ಫೆ.1ರಿಂದ ಯಳಸಂಗಿ ಮಠದಲ್ಲಿ ಸತ್ಸಂಗ ಸಮ್ಮೇಳನಕ್ಕೆ ಭರದ ಸಿದ್ಧತೆ

ಆಳಂದ:ಜ.19: ತಾಲೂಕಿನ ಯಳಸಂಗಿ ಗ್ರಾಮದಲ್ಲಿನ ಸದ್ಗುರು ಶ್ರೀ ಸಿದ್ಧರೂಢ ಮಠದಲ್ಲಿ ಫೆ. 1ರಿಂದ 3ರವರೆಗೆ ಶ್ರೀಮಠದ ಶ್ರೀ ಪರಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡ ಬೃಹತ್ ಸತ್ಸಂಗ ಸಮ್ಮೇಳನ ಸೇರಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಕ್ತ ಮಂಡಳಿ ಈಗಿನಿಂದಲೇ ಕೈಗೊಳ್ಳುವ ಭರದ ಸಿದ್ಧತೆಗೆ ಮಠದ ಪರಮಾನಂದ ಶ್ರೀಗಳ ಗದ್ದುಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಕುರಿತು ತಾಲೂಕಿನ ಯಳಸಂಗಿ ಗ್ರಾಮದ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದ ಕುರಿತು ಸದ್ಗುರು ಶ್ರೀ ಸಿದ್ಧರೂಢ ಮಠದ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಕ್ತಮಂಡಳಿಯು ಶ್ರೀಗಳ ನೇತೃತ್ವದಲ್ಲಿ ಗದ್ದುಗೆ ಪೂಜೆ ನೆರವೇರಿಸಿ ಸಿದ್ಧತೆಗೆ ಆರಂಭಿಸಿದರು.

ಮೂರು ದಿನಗಳ ಕಾಲ ಶ್ರೀಮಠದಲ್ಲಿ ಸದ್ಗುರು ಸಿದ್ಧರೂಢ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ 23ನೇ ವಾರ್ಷಿಕೋತ್ಸವ, ಪೀಠಾಧಿಪತಿ ಶ್ರೀ ಪರಮಾನಂದ ಮಹಾಸ್ವಾಮಿಗಳ ಪಟ್ಟಾಧೀಕಾರ ಮಹೋತ್ಸವದ ದಶಮಾನೋತ್ಸವ ಹಾಗೂ ಸದ್ಗುರು ಶ್ರೀ ಸಿದ್ಧರೂಢ ಮಹಾಸ್ವಾಮಿಗಳ ಕಥಾಮೃತ ದಶಮಾನೋತ್ಸವ ಮತ್ತು ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರ, ಅಂಗವಾಗಿ ಬೃಹತ್ ಸತ್ಸಸಂಗ ಸಮ್ಮೇಳನ ಜರುಗಲಿದೆ ಎಂದು ಅವರು ಹೇಳಿದರು.

ಫೆ.1ರಂದು ಬೆಳಗಿನ 9:00ಗಂಟೆಗೆ ಪ್ರಣವ ಧ್ವಜಾರೋಹಣ ಮತ್ತು ಗೋ ಪೂಜೆ ನೆರವೇರುವುದು. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬೀದರ ಚಿದಂಬರಾಶ್ರಮದ ಡಾ. ಶಿವುಕುಮಾರ ಮಹಾಸ್ವಾಮಿಗಳು, ಮುಚ್ಚಳಂಬದ ಪ್ರಣವಾನಂದ ಮಹಾಶಿವಯೋಗಿಗಳು ಯಳಸಂಗಿ, ಮುತ್ತ್ಯಾನ ಬಬಲಾದ ಮಠದದ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಅಧ್ಯಕ್ಷತೆ ವಿಜಯಪೂರ ಶಾಂತಾಶ್ರಮದ ಅಭಿನವ ಸಿದ್ಧರೂಢ ಮಹಾಸ್ವಾಮಿಗಳು ವಹಿಸುವರು. ಅಲ್ಲದೆ, ಕಲಬುರಗಿ, ಪುರದಾಳ, ಸೇಡಂ, ಚಳಕಾಪೂರ, ಬಾಲ್ಕಿ, ಮೈಂದಗಿ ಮಠಾಧೀಶರು ಆಗಮಿಸುವರು.

ಫೆ. 2ರಂದು ಕಲಬುರಗಿ ಚಿರಾಯು ಆಸ್ಪತ್ರೆಯ ವೈದ್ಯರಿಂದ ಉಚಿತ ನೇತೃ ತಪಾಸಣೆ ಶಿಬಿರ ಮತ್ತು ಸಂಜೆ 6:00ಗಂಟೆಗೆ ವಿಜಯಪೂರ ಲಿಂ. ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ನುಡಿನಮನ ಹಾಗೂ ದೀಪೋತ್ಸವ ಜರುಗುವುದು.

ಫೆ.3ರಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಅಯುರ್ವೇದ ಚಿಕಿತ್ಸಾ ಶಿಬಿರ ಸೇರಿದಂತೆ ಧಾರ್ಮಿಕ ಸಮಾರಂಭ ನಡೆಯಲಿದೆ.

ಅಂದು ಸಮ್ಮೇಳನದಲ್ಲಿ ಶಾಸಕ ಸುಭಾಷ ಗುತ್ತೇದಾರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಮಾಜಿ ಸಚಿವ ಸಿಚಿವ ಸಿದ್ಧರಾಮ ಎಸ್. ಮೇತ್ರೆ, ಮಾಜಿ ಶಾಸಕ ಬಿ.ಆರ್. ಪಾಟೀಲ, ಹರ್ಷಾನಂದ ಗುತ್ತೇದಾರ, ಗುರುಶರಣ ಪಾಟೀಲ ಕೊರಳ್ಳಿ, ಸಿದ್ಧರಾಮ ಪ್ಯಾಟಿ, ಬಸವರಾಜ ಕೊರಳ್ಳಿ, ಆನಂದ ಪಾಟೀಲ, ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ, ಸಿದ್ಧರೂಢ ಸರಸಂಬಿ, ಕಸಾಪ ಅಧ್ಯಕ್ಷ ಹಣಮಂತ ಶೇರಿ ಸೇರಿದಂತೆ ಅನೇಕರಿಗೆ ಸನ್ಮಾನ ನಡೆಯಲಿದೆ.

ಸತ್ಸಂಗ ಸಮ್ಮೇಳನ ಅಂಗವಾಗಿ ಪ್ರವಚನ, ಸಂಗೀತ, ಸಾಂಸ್ಕøತಿಕ ಕಾರ್ಯಕ್ರಮಗಳು, ಶ್ರೀ ಸಿದ್ಧರೂಢ ಮೂತಿಗೆ ತುಲಾಬಾರ ಜರಗಲಿದ್ದುರೀ ಸಮಾರಂಭಕ್ಕೆ ನಾಡಿನ ಹರ, ಗುರು ಚರಮೂರ್ತಿಗಳು ಗಣ್ಯರು ಪಾಲ್ಗೊಳ್ಳಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುವಿನ ದರ್ಶನಾಶೀರ್ವಾದ ಮತ್ತು ಆರೋಗ್ಯ ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಭಕ್ತಮಂಡಳಿ ಕೋರಿದೆ.