ಫೆ. 1ರಂದು ಕಾರ್ಖಾನೆಗಳ ವಿರುದ್ಧ ಬೃಹತ್ ಪ್ರತಿಭಟನೆ

ಹುಮನಾಬಾದ್: ಜ.30:ಪರವಾನಿಗೆ ರಹಿತ ಹಾಗೂ ಸರಕಾರದ ನಿಯಮಗಳಿಗೆ ವಿರುದ್ಧವಾಗಿ ಹುಮನಾಬಾದ್ ಪಟ್ಟಣದ ಹೊರವಲಯದಲ್ಲಿ ಕಾರ್ಖಾನೆಗಳು ತಲೆ ಎತ್ತಿ ನಿಂತಿವೆ. ಈ ಕಾರ್ಖಾನೆಗಳ ವಿರುದ್ಧ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ಕೈಗೊಳ್ಳುವ ಹಿನ್ನಲೆ ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಇತ್ತಿಚೆಗೆ ಪಟ್ಟಣದ ಶ್ರೀಪ್ರಸನ್ ಫ್ರೀ ಪೆÇ್ರೀಸೆಸ್ ಕಾರ್ಖಾನೆಯಲ್ಲಿ ರಾಸಾಯನಿಕ ಅನಿಲ ಸೋರಿಕೆಯಿಂದ ಇಬ್ಬರು ಯುವ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಕಾರ್ಖಾನೆ ನಡೆಸುವಂತೆ ಬೀದರ್ ನಗರದಲ್ಲಿ ಅನುಮತಿ ನೀಡಲಾಗಿದೆ. ಆದರೆ ಬೀದರ್ ನಗರದಲ್ಲಿ ಕಾರ್ಖಾನೆ ನಡೆಸದೇ ಹುಮನಾಬದ್ ಪಟ್ಟಣದಲ್ಲಿ ರಾಜರೋಷವಾಗಿ ನಡೆಯುತ್ತಿದೆ. ಕೈಗಾರಿಕಾ ಘಟಕಗಳ ಪ್ರತಿಭಟನೆ ಮಾಡುವುದು ಅನಿವಾರ್ಯತೆ ಎದುರಾಗಿದೆ ಎಂದರು.

ಕೈಗಾರಿಕಾ ಘಟಕಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಶಾಸಕರು ಹಾಗೂ ಅವರ ಸಹೋದರು ಒಟ್ಟಾಗಿ ಹಣ ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಜತಗೆ ಕಾರ್ಖಾನೆಗಳಿಂದ ಹೊರ ಬರುವ ಇದ್ದಿಲು (ಕೊಳಸೆ) ತಮ್ಮ ಸ್ವಂತ ಜಮೀನಿನಲ್ಲಿ ಸಂಗ್ರಹಿಸಿ

ಈ ಸಂದರ್ಭದಲ್ಲಿ ಡಾ. ಚಂದ್ರಶೇಖರ ಪಾಟೀಲ್,
ಭೀಮರಾವ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಫ್ಸರಮಿಯ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಓಂಕಾರ ತುಂಬಾ, ಯುವ ಕಾಂಗ್ರೆಸ್ ಅಧ್ಯಕ್ಷ ಸಮಿತಿ ಅಧ್ಯಕ್ಷ ಉಮೇಶ ಜಮಗಿ, ಮಾಣಿಕ ನಗರ ಗ್ರಾಪಂ. ಅಧ್ಯಕ್ಷೆ ಪಂಚಶೀಲಾ ಹೆಗಣಿ, ಸುರೇಶ ಘಾಂಗ್ರೆ, ಮಲ್ಲಿಕಾರ್ಜುನ್ ಶರ್ಮಾ, ಮಲ್ಲಿಕಾರ್ಜುನ್ ಪ್ರಭಾ, ಮಲ್ಲಿಕಾರ್ಜುನ್ ಹುಮನಾಬಾದೆ, ಕಾಂಗ್ರೆಸ್ ಮುಖಂಡರು ಸೇರಿ ಅನೇಕರಿದ್ದರು.