ಫೆ.೪ ಸಂಘದ ಸಂಸ್ಥಾಪನಾ ಪ್ರಾರಂಭೋತ್ಸವ

ರಾಯಚೂರು,ಫೆ.೨ – ಜಿಲ್ಲಾ ವೀರಶೈವ ಜಂಗಮ ಪುರೋಹಿತ ಅರ್ಚಕರ ಸಂಘದ ಸಂಸ್ಥಾಪನಾ ಪ್ರಾರಂಭೋತ್ಸವವನ್ನು ಫೆ.೦೪ ರಂದು ಹಮ್ಮಿಕೊಳ್ಳಲಾಗಿದೆ ಎಂದು ಪಂಪಾಪತಿ ಶಾಸ್ತ್ರಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಗೆ ಜರುಗಲಿದೆ. ಹರಗುರು ಚರಮೂರ್ತಿಗಳು ಆಗಮಿಸಲಿದ್ದು, ಸಚಿವ ಎನ್.ಎಸ್. ಬೋಸರಾಜು, ಶಾಸಕರಾದ ಡಾ.ಶಿವರಾಜ್ ಪಾಟೀಲ, ಬಸನಗೌಡ ದದ್ದಲ್, ಅವರು ಭಾಗವಹಿಸಲಿದ್ದು, ವೀರಶೈವ ಸಮಾಜದ ಮುಖಂಡರು, ಬೇಡ ಜಂಗಮ ಸಮಾಜದ ಸಂಘಟನೆಗಳು ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕಿನ ದೇವಸ್ಥಾನದ ಅರ್ಚಕರು, ರುದ್ರಸೇನೆ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಶಾಸ್ತ್ರಿ, ಶಿವಯ್ಯ ಶಾಸ್ತ್ರಿ, ಸಂಗಯ್ಯ ಶಾಸ್ತ್ರಿ, ವೀರಯ್ಯ ಶಾಸ್ತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.