ಫೆ .೪ ನಿಜಾಂ ಕರ್ನಾಟಕದ ಪಂ. ಡಿ.ಎಂ.ಸೂಗವೀರ ಶರ್ಮ ಕೃತಿ ಲೋಕಾರ್ಪಣೆ

ರಾಯಚೂರು, ಫೆ.೨- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವ್ಯಾಷನ್ದ ಲಕ್ಷ್ಮೀ ದೇವಿ ಶಾಸ್ತ್ರಿ ಅವರ ನಿಜಾಂ ಕರ್ನಾಟಕದ ಪಂ. ಡಿ.ಎಂ.ಸೂಗವೀರ ಶರ್ಮ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಫೆಬ್ರುವರಿ ೪ ರಂದು ಲೋಕಾರ್ಪಣೆಗೊಳ್ಳುವುದೆಂದು ವಿಶ್ವನಾಥ ಶಾಸ್ತ್ರಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಕನ್ನಡ ಭವನದಲ್ಲಿ ಅಂದು ಬೆಳಿಗ್ಗೆ ೧೦.೩೦ ಕ್ಕೆ ಬಳ್ಳಾರಿ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದ ಅವರು, ಸಾನಿಧ್ಯವನ್ನು ಕಿಲ್ಲೇ ಬೃಹನ್ಮಠದ ಶ್ರೀಗಳು ವಹಿಸಲಿದ್ದು, ನಿವೃತ್ತ ಪ್ರಾಚಾರ್ಯ ಪರಮೇಶ್ವರಪ್ಪ ಸಾಲಿಮಠ ಕೃತಿ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಚಂದ್ರಕಾಂತ್ ಎಸ್. ರಸ್ತಾಪುರ್, ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ.ಬಿ.ಎಂ. ಶರಭೇಂದ್ರಸ್ವಾಮಿ, ಹಿರಿಯ ಸಾಹಿತಿ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ವೆಂಕಟೇಶ ಬೇವಿನಬೆಂಚಿ ವಹಿಸಲಿದ್ದಾರೆ. ವೇದಿಕೆಯಲ್ಲಿ ಸೂಗವೀರ ವರ್ಮಾ ಅವರ ಹಿರಿಯ ಪುತ್ರಿ ಅಕ್ಕಮಹಾದೇವಿ ಚಂಡ್ರಿಕಿಮಠ, ಕೃತಿಕಾರರಾದ ಲಕ್ಷ್ಮೀದೇವಿ ಶಾಸ್ತ್ರಿ ಪ್ರಕಾಶಕರಾದ ವಿಶ್ವನಾಥ ಶಾಸ್ತ್ರಿ ಇರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಂಪಾಪತಿ ಶಾಸ್ತ್ರಿ, ಲಕ್ಷ್ಮೀದೇವಿ ಶಾಸ್ತ್ರಿ, ಸೂಗವೀರ ಸೇರಿದಂತೆ ಇತರರು ಉಪಸ್ಥಿತರಿದ್ದರು.