ಫೆ. ೨೬ ರವರೆಗೆ ಕಲಾಪ ವಿಸ್ತರಣೆ

ಬೆಂಗಳೂರು, ಫೆ. ೨೩- ವಿಧಾನಮಂಡಲದ ಅಧಿವೇಶನವನ್ನು ಒಂದು ದಿನ ಅಂದರೆ ಫೆ. ೨೬ ಸೋಮವಾರದವರೆಗೂ ವಿಸ್ತರಿಸಲಾಗಿದೆ.
ವಿಧಾನಸಭೆಯಲ್ಲಿಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬಜೆಟ್ ಅಧಿವೇಶನವನ್ನು ಫೆ. ೨೬ ರಂದು ಒಂದು ದಿನ ವಿಸ್ತರಿಸಿರುವ ನಿರ್ಧಾರವನ್ನು ತೀರ್ಮಾನವನ್ನು ಪ್ರಕಟಿಸಿದರು.
ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಸದನದಲ್ಲಿ ಉತ್ತರ ಕೊಡಬೇಕಿತ್ತು. ಆದರೆ ಮುಖ್ಯಮಂತ್ರಿಗಳು ಸೋಮವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡಲಿದ್ದು, ಅಧಿವೇಶವನ್ನು ಸೋಮವಾರ ವಿಸ್ತರಿಸುವ ತೀರ್ಮಾನನ್ನು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಿಎಂಗೆ ಗಂಟಲು ನೋವು
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕಳೆದ ೨-೩ ದಿನಗಳಿಂದ ಗಂಟಲು ಬೇನೆ ಇದ್ದು, ಈ ಕಾರಣದಿಂದ ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲು ಸಾಧ್ಯವಾಗಿಲ್ಲ. ಸೋಮವಾರ ಉತ್ತರ ನೀಡಲಿದ್ದಾರೆ.
ಕಳೆದ ಮಂಗಳವಾರ ಸಹ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಗಂಟಲು ನೋವನಿಂದ ರಾಜ್ಯಪಾಲರ ಮೇಲಿನ ಚರ್ಚೆಗೆ ಉತ್ತರ ನೀಡಲು ತಡವಾಯಿತು ಎಂದು ಸದನದಲ್ಲೇ ಹೇಳಿದ್ದರು.
ಇನ್ನೂ ಮುಖ್ಯಮಂತ್ರಿಗಳಿಗೆ ಗಂಟಲು ನೋವು ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.