ಫೆ. ೧ ಕೇಂದ್ರ ಬಜೆಟ್ ಮಂಡನೆ

ನವದೆಹಲಿ,ಜ.೧೩- ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಫೆ. ೧ ರಂದು ಮಂಡನೆಯಾಗಲಿದೆ.
ಕರ್ನಾಟಕ ಸೇರಿದಂತೆ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯುವ ರಾಜ್ಯಗಳಿಗೆ ಭರಪೂರ ಕೊಡುಗೆಗಳು ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ. ಶ್ರೀಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ಜನಪ್ರಿಯ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ಧತೆ ನಡೆಸಿದ್ದಾರೆ.ಕೇಂದ್ರ ಮುಂಗಡ ಪತ್ರದ ಬಜೆಟ್ ಅಧಿವೇಶನ ಈ ತಿಂಗಳ ೩೧ ರಿಂದ ಏಪ್ರಿಲ್ ೬ರ ವರೆಗೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.೨೦೨೩ -೨೪ ನೇ ಸಾಲಿನ ಮುಂಗಡ ಪತ್ರವನ್ನು ಫೆ.೧ ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ,ಜನವರಿ ೩೧ ರಿಂದ ಏಪ್ರಿಲ್ ೬ ರವರೆಗೆ ಎರಡು ಹಂತದಲ್ಲಿ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ದಿನ ಸಂಸತ್ತಿನ ಉಭಯ ಸದನದ ಸದಸ್ಯರನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಒಟ್ಟು ೨೭ ಸಭೆಗಳು ೬೬ ದಿನಗಳಲ್ಲಿ ಸಾಮಾನ್ಯ ವಿರಾಮದೊಂದಿಗೆ ಕಲಾಪ ನಡೆಯಲಿದೆ ಎಂದು ಅವರು ಹೇಳಿದರು.ಕಳೆದ ವರ್ಷ ಆಗಸ್ಟ್‌ನಲ್ಲಿ ದ್ರೌಪದಿ ಮುರ್ಮು ಅವರು ರಾಷ್ಡ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಇದೇ ಮೊದಲ ಬಾರಿಗೆ ಭಾಷಣ ಮಾಡಲಿದ್ದಾರೆ ಎಂದರು ತಿಳಿಸಿದ್ದಾರೆ.ಹಲವು ಗೊಂದಲಗಳ ನಡುವೆ ಕಳೆದ ತಿಂಗಳು ಚಳಿಗಾಲದ ಅಧಿವೇಶನವನ್ನು ಅರ್ದಕ್ಕೆ ಮೊಟಕು ಮಾಡಲಾಗಿತ್ತು. ಹೀಗಾಗಿ ಬಜೆಟ್ ಅಧಿವೇಶನವನ್ನು ಹೆಚ್ಚು ದಿನಗಳ ಕಾಲ ನಡೆಸಲಾಗುತ್ತಿದೆ.ಅಮೃತ್ ಕಾಲ ನಡುವೆ, ರಾಷ್ಟ್ರಪತಿಗಳ ಭಾಷಣ, ಕೇಂದ್ರ ಬಜೆಟ್ ಮತ್ತು ಇತರ ವಿಷಯಗಳ ಮೇಲಿನ ಧನ್ಯವಾದಗಳ ಬಗ್ಗೆ ಚರ್ಚೆಗಳನ್ನು ಎದುರು ನೋಡಲಾಗುತ್ತಿದೆ ಎಂದರು.

ಫೆ.೧೪ ರಿಂದ ಬಿಡುವು:

ಫೆಬ್ರವರಿ ೧೪ ರಿಂದ ಮಾರ್ಚ್ ೧೨ ರವರೆಗೆ ಕಲಾಪಕ್ಕೆ ಬಿಡುವು ನೀಡಲಾಗಿದ್ದು ಮಾರ್ಚ್ ೧೨ ಮತ್ತೆ ಕಲಾಪ ಆರಂಭವಾಗಲಿದೆ ಎಂದು ಹೇಳಿದರು.೨೦೨೩ ರ ಬಜೆಟ್ ಅಧಿವೇಶನದಲ್ಲಿ, ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳು ಅನುದಾನಕ್ಕಾಗಿ ಬೇಡಿಕೆಗಳನ್ನು ಪರಿಶೀಲಿಸಲು ಮತ್ತು ತಮ್ಮ ಸಚಿವಾಲಯಗಳು ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಮಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದಿದ್ದಾರೆ.ಚಳಿಗಾಲದ ಅಧಿವೇಶನದಲ್ಲಿ, ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಡಿಸೆಂಬರ್ ೯ ರಂದು ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ಬಗ್ಗೆ ಚರ್ಚಿಸಲು ತಮಗೆ ಅವಕಾಶ ನೀಡಲಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಇದು ಹಲವು ಅಡ್ಡಿಗಳಿಗೆ ಕಾರಣವಾಗಿತ್ತುಭಾರತದಲ್ಲಿ, ಆಹಾರ ಬೆಲೆಗಳಲ್ಲಿನ ಮಿತಗೊಳಿಸುವಿಕೆಯು ಡಿಸೆಂಬರ್‌ನಲ್ಲಿ ೧೨ ತಿಂಗಳ ಕನಿಷ್ಠ ೫.೭ ಶೇಕಡಾಕ್ಕೆ ಚಿಲ್ಲರೆ ಹಣದುಬ್ಬರ ತಂದಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದೆ. ಡಿಸೆಂಬರ್ ೨೦೨೨ ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಸತತ ನಾಲ್ಕನೇ ತ್ರೈಮಾಸಿಕವಾಗಿದ್ದು, ಸಿಪಿಐ ಶೇಕಡಾ ೬ ಕ್ಕಿಂತ ಹೆಚ್ಚಿತ್ತು. ಆರ್‌ಬಿಐನ ಫೆಬ್ರವರಿ ಹಣಕಾಸು ನೀತಿ ಸಮಿತಿ ಸಭೆಯು ಆರ್ಥಿಕ ಕ್ಯಾಲೆಂಡರ್‌ನಲ್ಲಿ ಪ್ರಮುಖ ಘಟನೆಯಾಗಿ ಉಳಿದಿದೆ.

ಫೆ. ೧೭ ರಾಜ್ಯ ಬಜೆಟ್
ಕೇಂದ್ರ ಬಜೆಟ್ ಫೆ. ೧ ರಂದು ಮಂಡಿಸಲು ನಿರ್ಧರಿಸಿರುವಾಗಲೇ ರಾಜ್ಯ ಬಜೆಟ್ ಫೆ. ೧೭ ರಂದು ಮಂಡನೆಯಾಗಲಿದೆ. ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು, ಫೆ. ೧೭ ರಂದು ರಾಜ್ಯ ಬಜೆಟ್ ಮಂಡಿಸಲು ನಿರ್ಧರಿಸಿದ್ದು, ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ.
ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ೧೭ ರಿಂದ ಆರಂಭವಾಗುವ ಸಾಧ್ಯತೆಗಳಿದ್ದು, ಅಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು, ೨೦೨೩-೨೪ನೇ ಸಾಲಿನ ಬಜೆಟ್‌ನ್ನು ಮಂಡಿಸುವರು ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.

ಜನವರಿ ೩೧ ರಿಂದ ಏಪ್ರಿಲ್ ೬ ರ ವರೆಗೆ ಕೇಂದ್ರ ಮುಂಗಡ ಪತ್ರ ಅಧಿವೇಶನ

ಮೊದಲ ದಿನ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ರಾಷ್ಡ್ರಪತಿ ದ್ರೌಪದಿ ಮುರ್ಮು ಭಾಷಣ

ಫೆ.೧ ರಂದು ೨೦೨೩-೨೪ ನೇ ಸಾಲಿನ ಕೇಂದ್ರ ಮುಂಗಡ ಪತ್ರ ಮಂಡನೆ

ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ

ಎರಡು ಹಂತದಲ್ಲಿ ಕಲಾಪ

ಕರ್ನಾಟಕ ಸೇರಿ ೯ ರಾಜ್ಯಗಳಿಗೆ ಈ ವರ್ಷ ವಿಧಾನಸಭೆ ಚುನಾವಣೆ

ಚುನಾವಣಾ ಘೋಷಣೆಗಳ ಬರಪೂರ ಕೊಡುಗೆ ನಿರೀಕ್ಷೆ.

ಫೆಬ್ರವರಿ ೧೪ ರಿಂದ ಮಾರ್ಚ್ ೧೨ರ ವರೆಗೆ ಕಲಾಪಕ್ಕೆ ಬಿಡುವು