ಫೆ.೧: ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ರಾಯಚೂರು,ಜ.೨೧- ಜಿಲ್ಲಾಡಳಿತ ವತಿಯಿಂದ ಫೆಬ್ರವರಿ ೧ ರಂದು ಮಡಿವಾಳ ಮಾಚಿದೇವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾಧ್ಯಕ್ಷ ಜಿ.ಸುರೇಶ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ ೬ ಗಂಟೆಗೆ ಗದ್ವಾಲ್ ರಸ್ತೆ ಝರಿಬೆಟ್ಟದಲ್ಲಿರುವ ಶ್ರೀ ಮಾಚಿದೇವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಎಲೆ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುವುದು, ೮ ಗಂಟೆಗೆ ಶ್ರೀ ಮಾಚಿದೇವ ವೃತ್ತದಲ್ಲಿರುವ ಶ್ರೀ ಮಾಚಿದೇವರ ಪುತ್ತಳಿಗೆ ಸಮಾಜದ ಮುಖಂಡರು,ಗಣ್ಯರಿಂದ ಹಾಗೂ ವಿವಿಧ ಸಮಾಜದ ಮುಖಂಡರಿಂದ ಮಾಲಾರ್ಪಣೆ ಮಾಡಲಾಗುತ್ತದೆ ಎಂದರು.
ಬೆಳಿಗ್ಗೆ ೯:೩೦ಕ್ಕೆ ಖಾ,ಅಂಬಾ ಭವಾನಿ ಕೊಡು ಹತ್ತಿರ ಇರುವ ಮಡಿವಾಳ ಸಮುದಾಯ ಭವನದಿಂದ ಕನ್ನಡ ಭವನಕ್ಕೆ ವಿವಿಧ ಕಳ್ಳ ತಂಡಗಳಿಂದ ಮೆರವಣಿಗೆ ನಡೆಸಲಾಗುತ್ತದೆ. ಈ ಮೆರವಣಿಗೆಯು ಗಂಗಾನಿವಾಸ, ಡಾಕ್ಟ ರ್ಸ್ ಲೇನ್,ಸೂಪರ್ ಮಾರ್ಕೆಟ್ ವೃತ್ತದ ಮೂಲಕ ಏಕ್ ಮಿನಾರ್ ರಸ್ತೆ, ಜೇಲ್ ರಸ್ತೆ, ನಗರ ಸಭೆ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕನ್ನಡ ಭವನಕ್ಕೆ ತಲುಪುತ್ತದೆ ಎಂದ ಅವರು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿಯನ್ನು ಯಶಸ್ಸು ಗಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾಧ್ಯಕ್ಷರು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಆದೇಶಿಸಿದ್ದಾರೆ. ಆದರೆ
ಮಡಿವಾಳ ಜಯಂತಿಯ ಪೂರ್ವಭಾವಿ ಸಭೆ ಕುರಿತು ಸರ್ಕಾರದ ಆದೇಶವನ್ನು ಲೆಕ್ಕಿಸದೆ ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ಸಂಘದ ಜಿಲ್ಲಾಧ್ಯಕ್ಷರ ಹೆಸರಿನಲ್ಲಿ ಮೂಲಕ ಬಿಚ್ಚಾಲಿ ವಿರೂಪಾಕ್ಷಪ್ಪ ಅವರು ಪತ್ರಿಕ ಪ್ರಕಟಣೆ ನೀಡಿರುವುದು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಹೀಗೆ ಮುಂದುವರೆದಿದ್ದಾದರೆ ಕಾನೂನು ಮೊರೆ ಹೋಗಲಾಗುವುದು, ನಾವೆಲ್ಲ ಮಡಿವಾಳರು ಒಂದೇ ಎಂದು ಎಲ್ಲಾರು ಒಗ್ಗಟ್ಟಾಗಿ ಜಯಂತಿಯನ್ನು ಆಚರಿಸಿ ಯಶಸ್ವಿಗೊಳಿಸೋಣ. ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಹುಸೇನಪ್ಪ ವೆಂಕಟೇಶ ಎಚ್ ಮುನಸ್ವಾಮಿ ಜಂಬಣ್ಣ ಯಕ್ಲಾಸಪೂರ,ಆರ್.ವೀರೇಶ್,ಉಮಾ ವೀರೇಶ್ ಇದ್ದರು.