ಫೆ.೧೯ ಕಸಾಪ, ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

ಮಾನ್ವಿ.ಜ.೨೧- ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾನವಿ-ಸಿರವಾರ ತಾಲೂಕಿನ ವತಿಯಿಂದ ಫೆಬ್ರವರಿ ೧೯ ರಂದು ತಾಲೂಕ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದು ತಾಲೂಕಿನ ಸಾಹಿತ್ಯ ಆಸಕ್ತರು, ಕನ್ನಡ ಅಭಿಮಾನಿಗಳು, ಶಾಲೆ ಕಾಲೇಜು, ಸರ್ಕಾರಿ ನೌಕರರು, ಕನ್ನಡ ಪರ ಸಂಘಟನೆಯವರು, ಸಂಘ ಸಂಸ್ಥೆಯವರು, ವಿದ್ಯಾರ್ಥಿಗಳಿಗೆ ಭಾಗವಹಿಸುವಂತೆ ಹಾಗೂ ಇದಕ್ಕೆ ನಮ್ಮ ಸಲಹೆ ಸಹಕಾರ ಇದ್ದೆ ಇರುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು..
ನಂತರ ಮಾತಾನಾಡಿ ಶಾಸಕರು ನಮ್ಮ ಅವಧಿಯಲ್ಲಿ ಈಗಾಗಲೇ ಎರಡು ಸಾಹಿತ್ಯ ಸಮ್ಮೇಳನವನ್ನು ಬಹಳ ಅದ್ದೂರಿಯಾಗಿ ಮಾಡಲಾಗಿದ್ದು ಈಗಿನ ಮಹಿಳಾ ಸಾಹಿತ್ಯ ಸಮ್ಮೇಳನ ಬಹಳ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದ್ದು ತಾವು ಕೂಡ ಭಾಗವಹಿಸಲು ಕೋರಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ್ ಪಾಟೀಲ ಮಾತಾನಾಡಿ ಈಗಾಗಲೇ ನಮ್ಮ ತಾಲೂಕಿನಲ್ಲಿ ಒಟ್ಟು ೯ ಸಾಹಿತ್ಯ ಸಮ್ಮೇಳನಗಳು ನಡೆದಿದ್ದು ಪ್ರಥಮ ಬಾರಿಗೆ ನಡೆಯುವ ಮಹಿಳಾ ಸಮ್ಮೇಳನದ ಕುರಿತು ಜನವರಿ ೨೫ ರಂದು ಶಾಸಕ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಿದ್ದು ಕಾರ್ಯಕ್ರಮದ ರೂಪರೇಷೆಗಳನ್ನು ಕೈಗೊಳ್ಳಲಾಗುತ್ತದೆ ದಯವಿಟ್ಟು ಮಾನವಿ ಸಿರವಾರ ತಾಲೂಕಿನ ಕನ್ನಡ ಆಸಕ್ತರು, ಹಿರಿಯರು, ಶಿಕ್ಷಕರು,ಕನ್ನಡ ಪರ ಸಂಘಟನೆಯರು, ರಾಜಕೀಯ ನಾಯಕರು, ಸೇರಿದಂತೆ ಎಲ್ಲ ಸಮಾಜದವರು,ಪತ್ರಕರ್ತರು, ವಕೀಲರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಸವರಾಜ ಜಂಗಮರಳ್ಳಿ, ಮನ್ಸಾಲಿ ವೆಂಕಯ್ಯ ಶೆಟ್ಟಿ,ಶರಣಯ್ಯ ಸ್ವಾಮಿ, ಸಲ್ಲಾವುದ್ದೀನ್, ಬಸವರಾಜ ಕನ್ನಾರಿ,ಲಕ್ಷ್ಮಣ ಕಪಗಲ್, ಸಂಗಮೇಶ ಮುಧೋಳ, ಗೋಪಾಲ ಜೂಕೂರು, ಶಿವಗ್ಯಾನಿ ನಾಯಕ,ಹರ್ಷವರ್ಧನ,ಸಂತೋಷ ಹೂಗಾರ, ಭದ್ರಪ್ಪ, ಕೆ ಈ ವಿಜಯಲಕ್ಷ್ಮಿ,ಈರಮ್ಮ ಸೋಗಿ, ಪ್ರಕಾಶ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.