ಫೆಸಿಫಿಕ್ ವಲಯದಲ್ಲಿ ರಚನಾತ್ಮಕ ಭದ್ರತೆ ಅಗತ್ಯ

ನವದೆಹಲಿ,ನ.೨೫- ಇಂಡೋ – ಫೆಸಿಫಿಕ್ ವಲಯದಲ್ಲಿ ಸಮೃದ್ಧಿ ಮತ್ತು ಭದ್ರತೆಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಇಂದಿಲ್ಲಿ ಹೇಳಿದ್ಸಾರೆ.
ಈ ವಲಯದಲ್ಲಿ ಬಹು-ಹೊಂದಾಣಿಕೆ ಮತ್ತು ಎಲ್ಲರಿಗೂ “ಗೆಲುವು ಅಗತ್ಯವಾಗಿದೆ. ಗೆಲುವಿನ ಪರಿಸ್ಥಿತಿ ಗೆ ಭಾರತ ಶ್ರಮಿಸಲಿದೆ ಎಂದು ಅವರು ಹೇಳಿದ್ಸಾರೆ.
ದೆಹಲಿಯಲ್ಲಿ ನಡೆದ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಂಡೋ-ಪೆಸಿಫಿಕ್ ಪ್ರದೇಶದ ಅಭಿವೃದ್ದಿಗೆ ಜೊತೆಗೆಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶ, ಕೇವಲ ಪ್ರಾದೇಶಿಕ ಮಾತ್ರವಲ್ಲದೆ ಜಾಗತಿಕ ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಪ್ರಮುಖವಾಗಿದೆ. ಪ್ರದೇಶದಾದ್ಯಂತ ಮಾನವೀಯತೆಯ ಸಾಮಾನ್ಯ ಸಂದೇಶವ ಹಂಚಿಕೊಳ್ಳಲು ವಿಫುಲ ಅವಕಾಶವಿದೆ ಎಂದಿದ್ದಾರೆ.
ಸಮೃದ್ಧಿ ಮತ್ತು ಭದ್ರತೆಯ ಹಾದಿಯಲ್ಲಿ, ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಆಸಿಯಾನ್ ಕೇಂದ್ರೀಯತ ಪ್ರಯತ್ನಗಳು ತೀರಾ ಅಗತ್ಯ ಮತ್ತು ಅನಿವಾರ್ಯ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಯ ಇತ್ತೀಚಿನ ಜಿ ೨೦ ಭೇಟಿಯನ್ನು ಉಲ್ಲೇಖಿಸಿದ ರಾಜನಾಥ ಸಿಂಗ್, ಪ್ರಧಾನಿ ಮೋದಿ ಅವರು ದೃಢವಾದ ಸಂದೇಶವನ್ನು ವಿಶ್ವ ನಾಯಕರ ಮುಂದೆ ಪ್ರತಿಧ್ವನಿಸಿದ್ದಾರೆ ಎಂದರು.
ಇತರರ ವೆಚ್ಚದಲ್ಲಿ ಬಲಿಷ್ಠ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲಾಗುವುದಿಲ್ಲ, ಬದಲಿಗೆ ಇತರ ರಾಷ್ಟ್ರಗಳು ತಮ್ಮ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಸಹಾಯ ಮಾಡಲು ಭಾರತ ಸಿದ್ದವಿದೆ ಎಂದು ತಿಳಿಸಿದ್ದಾರೆ. ಸಂಕುಚಿತ ಸ್ವಹಿತಾಸಕ್ತಿಯಿಂದ ನಮಗೆ ಮಾರ್ಗದರ್ಶನ ನೀಡದೆ, ಪ್ರಬುದ್ಧತೆಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ದೇಶ ಬಹು ಜೋಡಣೆ ನೀತಿಯಲ್ಲಿ ನಂಬಿಕೆ ಹೊಂದಿದೆ ಎಂದು ತಿಳಿಸಿದ್ದಾರೆ.