ಫೆಡರಲ್ ಶಿಕ್ಷಣ ಸಂಸ್ಥೆ – ಶಿಕ್ಷಕರ ದಿನಾಚರಣೆ

ರಾಯಚೂರು.ಸೆ.೦೬-ಪಂಚಶೀಲ ತತ್ವಗಳ ಮುಖಾಂತರ ಬೋಧನೆ ಮಾಡಿದ್ದಲ್ಲಿ ಮಕ್ಕಳಿಗೆ ಅರ್ಥಪೂರ್ಣವಾಗಿ ಪಾಠ ಮಾಡಲು ಸಾಧ್ಯವೆಂದು ಖ್ಯಾತ ಜ್ಯೋತಿಷ್ಯತಜ್ಞರಾದ ಶಿವಯ್ಯ ತಾತ ಅವರು ಹೇಳಿದರು.
ಅವರಿಂದು ಫೆಡರಲ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮಾತನಾಡಿದರು. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ೧೩೪ ಜನ್ಮ ದಿನ ಹಾಗೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮಹ್ಮದ್ ಅಬ್ದುಲ್ ಹೈಫಿರೋಜ್ ಅವರು ಮಾತನಾಡಿ, ಶಾಸ್ತ್ರಯುಕ್ತ ಮೂಲಕ ನೀಡುವ ಬೋಧನೆಯೂ ಶಿಕ್ಷಕರ ವ್ಯಕ್ತಿತ್ವ ಮತ್ತು ಮೌಲ್ಯಗಳ ಮುಖಾಂತರ ಸಾಧನೆಗೆ ಸ್ಪೂರ್ತಿಯಾಗುತ್ತದೆಂದು ತಿಳಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಸತ್ಯನಾರಾಯಣ ಮಾತನಾಡುತ್ತಾ, ಮಕ್ಕಳಿಗೆ ಯಾವುದೇ ಕಿರುಕುಳ ನೀಡದೆ, ಉಪಯುಕ್ತ ರೀತಿಯಲ್ಲಿ ಶಿಕ್ಷಣ ನೀಡಿ, ಅವರ ಮನೋಬಲ ಹೆಚ್ಚಿಸಬೇಕೆಂದರು.
ಈ ಸಂದರ್ಭದಲ್ಲಿ ಶ್ರೀಲೇಖ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.