ಫುಡ್ ಕಿಟ್ ವಿತರಿಸುತ್ತಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ.

ಹರಪನಹಳ್ಳಿ.ಮೇ.೩೦; ಕೋರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾದ ಹರಪನಳ್ಳಿ ತಾಲೂಕಿನ‌‌ ಜನರಿಗೆ ಪುಡ್ ಕಿಟ್ ಹಾಗೂ ಸೊಂಕಿತರು ಹೆಚ್ಚಿರುವ ಗ್ರಾಮಗಳಲ್ಲಿ ಸ್ಯಾನಿಟೈಜರ್ ಸಿಂಪರಣೆ ಕಾರ್ಯವನ್ನು  ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಸ್ವಂತ ಖರ್ಚಿನಲ್ಲಿ  ತಾಲೂಕಿನಲ್ಲಿ  ಕೈಗೊಂಡಿದ್ದಾರೆ.

ಎಸ್ಸಿ, ಎಸ್ಟಿ,ಬಿಸಿಎಂ ಹಾಸ್ಟೆಲ್  ಅಡುಗೆ ಸಿಬ್ಬಂದಿಗೆ, ಪ್ರವಾಸಿ ಮಂದಿರ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರರಿಗೆ ಮತ್ತು ಸೊಂಕಿತರು ಹೆಚ್ಚಿರುವ ತಾಳೇದಹಳ್ಳಿ ಮತ್ತು ಯರಬಾಳು ಗ್ರಾಮಗಳಲ್ಲಿ  ಪುಡ್ ಕಿಟ್ ವಿತರಣೆ ಯನ್ನು ತಮ್ಮ  ಆಪ್ತರಾದ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ತಾ.ಪಂ ಸದಸ್ಯ ಮೈದೂರು ರಾಮಣ್ಣ  ಇತರ ಕಾರ್ಯಕರ್ತರ  ಮೂಲಕ ಮಾಡಿದ್ದಾರೆ.

ಯರಬಾಳು ಹಾಗೂ ತಾಳೇದಹಳ್ಳಿ ಗ್ರಾಮಗಳಲ್ಲಿ  ಸ್ಯಾನಿಟೈಜರ್ ಸಿಂಪರಣೆ ಸಹ  ಮಾಡಿಸಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಎ ಪಿ ಲತಾ ಆಭಿಮಾನಿ ಬಳಗದ ಕಾರ್ಯಕರ್ತರು ತಾಲೂಕಿನ್ಯಾದಂತಹ ನೂರಾರು ಬೆಂಬಲಿಗರು ಹಗಲಿರುಳು ಶ್ರಮಿಸುತ್ತಾರೆ  ಸುಮಾರು ೧೫೦೦ ಕುಟುಂಬಗಳಿಗೆ ಪುಡ್ ಕಿಟ್ ವಿತರಣೆ ಮಾಡಿಸಿದ್ದಾರೆ.