ಫುಡ್ ಕಿಟ್ ವಿತರಿಸಿದ ಮೇಯರ್

ದಾವಣಗೆರೆ.ಮೇ.೨೬; ನಗರದ ಎಂಸಿಸಿಬಿ ಬ್ಲಾಕಿನಲ್ಲಿ ಲಾಕ್ಡೌನ್ ಪ್ರಯುಕ್ತ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಆಹಾರದ ಕಿಟ್ಟನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ  ಮಹಾಪೌರರಾದ ವೀರೇಶ. ಎಸ್.ಟಿ. ಅವರು ಕಿಟ್  ಗಳನ್ನು ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ, ವಿತರಿಸಿದರು. ಈ ವೇಳೆ ಕಾರ್ಪೊರೇಟರ್  ಜಯಮ್ಮ, ದೇವಸ್ಥಾನದ ಧರ್ಮದರ್ಶಿಗಳಾದರಾಮ್ ಮೋಹನ್,. ಎಂ.ಎನ್. ಕನ್ನಡ ಪರ ಮತ್ತು ಪರಿಸರ ಪ್ರೇಮಿಗಳಾದ ಗೋಪಾಲಗೌಡರು. ಜಗದೀಶ್ ಮುರುಳಿದರ ಆಚಾರ್ಯ, ಸರೋಜಾ ರೆಡ್ಡಿ   ಮಂಜುನಾಥ್, ಲಕ್ಷ್ಮಣ್ ಅನೇಕರು ಇದ್ದರು.