ಫುಟ್ಬಾಲ್ ದಂತಕತೆ ಓಜೆ ಸಿಂಪ್ಸನ್ ನಿಧನ

ಯೂಯಾರ್ಕ್.ಏ.೧೨-ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಮೆರಿಕಾದ ಮಾಜಿ ತಾರಾ ಫುಟ್ಬಾಲ್ ಆಟಗಾರ ಓಜೆ ಸಿಂಪ್ಸನ್ (೭೬ ವರ್ಷ) ನಿಧನರಾಗಿದ್ದಾರೆ. ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕುಟುಂಬವು ಗೌಪ್ಯತೆಯನ್ನು ಮತ್ತು ದೇವರ ಅನುಗ್ರಹಕ್ಕಾಗಿ ಆಶಯಗಳನ್ನು ಗೌರವಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟರ್‌ನಲ್ಲಿ ಮನವಿ ಮಾಡಿದೆ.
ಸಿಂಪ್ಸನ್ ಫುಟ್ಬಾಲ್ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ರನ್ನಿಂಗ್ ಬ್ಯಾಕ್‌ಗಳಲ್ಲಿ ಒಬ್ಬರಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ಬಫಲೋ ಬಿಲ್ಸ್ (೧೯೬೯-೭೭),
ಸ್ಯಾನಿ ಫ್ರಾನ್ಸಿಸ್ಕೊ (೧೯೭೮-೭೯) ತಂಡಗಳ ಪರ ಆಡಿದ್ದರು. ೧೯೮೫ರಲ್ಲಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದರು.
ಸಿಂಪ್ಸನ್ ವಿವಾದಗಳಿಂದಲೂ ಸಾಕಷ್ಟು ಸುದ್ದಿಯಾದರು. ೧೯೯೪ರಲ್ಲಿ ಸಿಂಪ್ಸನ್ ತಮ್ಮ ಪತ್ನಿ ನಿಕೋಲ್ ಬ್ರೌನ್ ಮತ್ತು ಆಕೆಯ ಗೆಳೆಯನನನ್ ಕೊಂದ ಆರೋಪದಲ್ಲಿ ಸಿಲುಕಿದರು.
ಈ ಘಟನೆಯಿಂದ ಸಿಂಪ್ಸನ್ ಅವರ ಜೀವನ ಬದಲಾಯಿತು. ಪೊಲೀಸರಿಗೆ ಶರಣಾದರು. ನಂತರ ನಡೆದ ಕಾನೂನು ಹೋರಾಡದಲಲಿ ಅಂತಿಮವಾಗಿ ಪ್ರಕರಣದಿಂದ ದೋಷಮುಕ್ತರಾದರು. ೧೯೯೭ರಲ್ಲಿ ಸಿಂಪ್ಸನ್ ಮತ್ತೆ ಸುದ್ದಿಯಾದರು. ಗೋಲ್ಡ್‌ಮನ್ ಕುಟುಂಬವು ಸಿಂಪ್ಸನ್ ವಿರುದ್ಧ ಪ್ರಕರಣ ದಾಖಲಿಸಿತು. ಸಿಂಪ್ಸನ್ ಫ್ಲೋರಿಡಾದಿಂದ ಸ್ಥಳಾಂತರಗೊಂಡು ಸಾರ್ವಜನಿಕ ಬದುಕಿನಿಂದ ದೂರ ಉಳಿದರು.೧೩ ವರ್ಷಗಳ ನಂತರ ಶಸ್ತ್ರ ಸಜ್ಜಿತ ದರೋಡೆ ಮತ್ತು ಅಪಹರಣ ಪ್ರಕರಣದಲ್ಲಿ ಜೈಲು ಶಿಕ್ಷಗೆ ಗುರಿಯಾದರು.
೩೩ ವರ್ಷಗಳ ಶಿಕ್ಷಗೆ ಗುರಿಯಾದ ಸ್ಯಾಂಪ್ಸನ್೨೦೧೭ರಲ್ಲಿ ಪೆರೋಲ್ ಮೂಲಕ ಬಿಡುಗಡೆಯಾದರು.