ಫುಟ್ಬಾಲ್ ಗೆ ಹವಾ ತುಂಬುತ್ತಿರುವ ಮತದಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30: ನಗರದ 3 ನೇ ವಾರ್ಡಿನ ಗೌಳೇರಹಟ್ಟಿ, ಲಾಲಕಮಾನ್ ಪ್ರದೇಶದಲ್ಲಿ ಇಂದು ಕೆ.ಆರ್.ಪಿ ಪಕ್ಷದ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಅವರು ಮನೆಗೆ ತೆರಳಿ ಮತಯಾಚನೆ ಮಾಡಿದರು.
ನಮ್ಮ ಮನವಿಗೆ ಓಗೊಟ್ಟು ನಗರದ ಅನೇಕ ಪಕ್ಷಗಳ ಮುಖಂಡರು ನಮ್ಮ ಪಕ್ಷಕ್ಕೆ ಸೇರಿದ್ದಾರೆ, ಸೇರುತ್ತಿದ್ದಾರೆ. ಇದರಿಂದ ನಮ್ಮ ಫುಟ್ಬಾಲ್ ನಲ್ಲಿ ದಿನೇ ದಿನೇ ಹವಾ ಹೆಚ್ಚುತ್ತಿದೆ ಇದನ್ನು ಕಂಡು ಪ್ರತಿ ಪಕ್ಷಗಳಿಗೆ ನಡುಕ ಶುರುವಾಗಿದೆ. ಇದಕ್ಕೆಲ್ಲಾ ನೀವು ನೀಡುತ್ತಿರುವ  ಬೆಂಬಲ, ಆಶೀರ್ವಾದವೇ  ಕಾರಣ ಎಂದರು.
ಚುನಾವಣೆಯ ದಿನ ಏ 10 ರಂದು ಎಲ್ಲರೂ ಮತಗಟ್ಟೆಗೆ ಬಂದು ನಮ್ಮ ಗುರ್ತಿಗೆ ಮತ‌ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನಚಾರ್, ಬಳ್ಳಾರಿ ನಗರ ಘಟಕದ ಅಧ್ಯಕ್ಷ ಸುನೀಲ್ ಕುಮಾರ ರೆಡ್ಡಿ. ವಾರ್ಡ್ ಮುಖಂಡರಾದ  ಚಂದ್ರ,  ರೂಪ, ರಾಜೇಶ್ವರಿ, ಗೌಳೇರ ಸಮಾಜದ ನಾಗರಾಜ, ರಾಜ್ ಪ್ಯಾಷನ್ಸ್ ಅನ್ವರ್,ಕಲೀಮ್ ಗೋಲ್ಡ್, ವಲಿ, ಮಂಜು, ಅಜಯ್, ರವಿ, ಚಿನ್ನ, ಶಶಿ. ಇನ್ನೂ ಅನೇಕ  ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.