
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.24: ನಗರದ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಮತ್ತು ಪಾಲಿಕೆಯ ಮೂಲಕ ತನ್ನದೇ ರೀತಿಯಲ್ಲಿ ಗಮನ ಸೆಳೆಯುತ್ತ. ಹಲವು ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಹೋರಾಟ ಮಾಡುತ್ತ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಮೇಕಲ ಈಶ್ವರ ರೆಡ್ಡಿ. ಪ್ರಸಕ್ತ ಚುನಾವಣೆಯಲ್ಲಿ ಕೆಆರ್ ಪಿ ಪಕ್ಷದ ಫುಟ್ಬಾಲ್ ಹಿಡಿದು ಹಲವು ದಿನ ಮನೆ ಮನೆಗೆ ಹತ್ತಾರು ಯುವಕರಿಂದ ಪ್ರಚಾರ ಮಾಡಿ. ಈಗ ಕಾಂಗ್ರೆಸ್ ಪಕ್ಷಕ್ಕೆ ಜಂಪ್ ಆಗಿದ್ದಾರೆ.
ನಗರದ ಕ್ಷೇತ್ರದಿಂದ ಲಕ್ಷ್ಮೀ ಅರುಣಾ ಅವರು ಉತ್ತಮ ಮಹಿಳಾ ಅಭ್ಯರ್ಥಿಯಾಗಿದ್ದಾರೆಂದು ಪ್ರಚಾರ ಮಾಡಿದ ಅವರಿಗೆ. ಆ ಪಕ್ಷ ನೀಡಿದ ಭರವಶೆ ಈಡೇರಿಸಲಿಲ್ಲವಂತೆ. ಅದಕ್ಕಾಗಿ ಕೈ ಬೀಸಿ ಕರೆಯಿತು. ಈಗ ಅವರ ಪರವಾಗಿ ಪ್ರಚಾರ ಮಾಡುವೆ. ಯುವಕ ಉತ್ಸಾಹಿ ಇದ್ದಾನೆ. ನಗರದ ಅಭಿವೃದ್ಧಿಯ ಕನಸು ಅವರಿಗಿದೆ ಅದಕ್ಕಾಗಿ ಮತ್ತು ನಾವು ತಂದ ಸಮಸ್ಯೆಗಳಿಗೆ ಈಡೇರಿಸುವ ಭರವಶೆ ನೀಡಿದ್ದಾರೆ. ಹಾಗಂತ ಅವರ ಪರವಾಗಿ ಪ್ರಚಾರ ಮಢಲಿದೆ ಹೊರತು ಕಾಂಗ್ರೆಸ್ ಪಕ್ಷ ಸೇರಿಲ್ಲ ಎಂದಿದ್ದಾರೆ.