ಫೀಸ್‍ಗಾಗಿ ಪೋಷಕರಿಗೆ ಬಲವಂತ

ಮೈಸೂರು:ಮಾ:27: ಫೀಸ್ ಕಟ್ಟಲಾಗದ ಮಕ್ಕಳಿಗೆ ಪರೀಕ್ಷೆ ಬರೆಯಲು ತೊಂದರೆ ನೀಡಬಾರದೆಂದು ಕ್ಯಾಥೋಲಿ ಸಮುದಾಯದ ಸಮಾಜ ಸೇವಕರಾದ ಜೆ. ಸ್ಟೀಫನ್ ಸುಜೀತ್ ತಿಳಿಸಿದ್ದಾರೆ.
ಈ ಬಾರಿ ಕೋವಿಡ್ ನಿಂದ ಶಾಲೆಗಳಲ್ಲಿ ಫೀಸ್ ಕಟ್ಟಲು ಸಾಧ್ಯವಾಗದ ಮಕ್ಕಳಿಗೆ ಪರೀಕ್ಷೆ ಬರೆಯಲು ಯಾವ ತೊಂದರೆ ಮಾಡಬಾರದೆಂದು ಸರ್ಕಾರದ ಆದೇಶ ವಿದ್ದರೂ ಸಹ ಸರ್ಕಾರದ ಆದೇಶಕ್ಕೆ ಯಾವುದೇ ಮಾನ್ಯತೆ ಕೊಡದೆ ಪರೀಕ್ಷೆ ತೆಗದುಕೊಳ್ಳಲು ಹಾಲ್ ಟಿಕೆಟ್ ಬೇಕೆಂದರೆ ಫೀಸ್ ಕಟ್ಟಲೇಬೇಕು ಎಂದು ಬಲವಂತ ಪಡಿಸಿ ಪೆÇೀಷಕರಿಗೆ ಕಿರುಕುಳ ನೀಡುತ್ತಿದ್ದ ಎಂ.ಡಿ.ಇ.ಎಸ್(ಸಂತ ಜೋಸೆಫ್ ಸ್ಕೂಲ್ ಜಯಲಕ್ಷ್ಮೀಪುರಂ)ಶಿಕ್ಷಣ ಸಂಸ್ಥೆಗೇ ಮಕ್ಕಳ ಪರೀಕ್ಷೆಗೆ ಯಾವುದೇ ತೊಂದರೆ ನಿಡಬಾರದೆಂದು ಸಂಸ್ಥೆಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಕ್ಯಾಥೋಲಿ ಸಮುದಾಯದ ಸಮಾಜ ಸೇವಕರಾದ ಜೆ. ಸ್ಟೀಫನ್ ಸುಜೀತ್ ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಉದಯ ಕುಮಾರ್ ರವರಿಗೆ ನೀಡಿದ್ದ ದೂರನ್ನು ಸೂಕ್ಷ್ಮವಾಗಿ ಪರಿಗಣಿಸಿದ ಅಧಿಕಾರಿಗಳು ಎಂ. ಡಿ.ಇ.ಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಿಗೆ ಫೀಸ್ ಕಟ್ಟಲಾಗದಂತಹ ಮಕ್ಕಳು ಪರೀಕ್ಷೆ ಬರೆಯಲು ಯಾವ ರೀತಿಯಲ್ಲೂ ತೊಂದರೆ ನೀಡಬಾರದೆಂದು ನೋಟಿಸ್ ನೀಡಿ ಹಣವಿಲ್ಲದೆ ಕಳವಳದಲ್ಲಿದ ಪೆÇೀಷಕರು ನಿಟ್ಟುಸಿರು ಬಿಡುವಂತೆ ಮಾಡಿ ಸಕಾಲದಲ್ಲಿ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯಕುಮಾರ್(ಬಿ.ಇ.ಓ) ರವರಿಗೆ ಜೆ.ಸ್ಟೀಫನ್ ಸುಜೀತ್ ರವರು ತೊಂದರೆಯಲ್ಲಿದ್ದ ಎಲ್ಲಾ ಪೆÇೀಷಕರ ಪರವಾಗಿ ಅಭಿನಂದನೆ ಸಲ್ಲಿಸಿದ್ದರು.