ಬೇಕಾಗುವ ಸಾಮಗ್ರಿಗಳು:
- ಮೀನು – ೨೫೦ ಗ್ರಾಂ
- ಆಲೂಗೆಡ್ಡೆ – ೧೦೦ ಗ್ರಾಂ
- ಮೊಟ್ಟೆ – ೨
- ನಿಂಬೆಹಣ್ಣು – ೧
- ಬ್ರೆಡ್ ಕ್ರಮ್ಸ್ – ೧೦೦ ಗ್ರಾಂ
- ಉಪ್ಪು – ಅರ್ಧ ಚಮಚ
- ಕಾಳುಮೆಣಸಿನಪುಡಿ – ೧ ಚಮಚ
- ಅರಿಶಿನಪುಡಿ – ಅರ್ಧ ಚಮಚ
- ಕೊತ್ತಂಬರಿ ಸೊಪ್ಪು – ೨ ಚಮಚ
- ಎಣ್ಣೆ – ೫೦೦ ಮಿಲಿ
ಮಾಡುವ ವಿಧಾನ:
ಮೀನಿಗೆ ನೀರು ಹಾಕಿ ಬೇಯಿಸಿ, ಬೆಂದ ಮೇಲೆ ಮುಳ್ಳನ್ನು ತೆಗೆದು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ, ಅದಕ್ಕೆ ಬೇಯಿಸಿದ ಆಲೂಗೆಡ್ಡೆ, ಮೊಟ್ಟೆ, ನಿಂಬೆರಸ, ಕಾಳುಮೆಣಸಿನಪುಡಿ, ಅರಿಶಿನ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ವಡೆಯಂತೆ ಕೈಯಲ್ಲಿ ತಟ್ಟಿ ಬ್ರೆಡ್ ಕ್ರಮ್ಸ್‌ನಲ್ಲಿ ಹೊರಳಿಸಿ ಕಾದಎಣ್ಣೆಯಲ್ಲಿ ಕರಿದರೆ ಸ್ವಾದಿಷ್ಟ ಫಿಶ್ ವಡಾ ಸವಿಯಲು ಸಿದ್ದ.