ಫಿಶ್ ರವಾ ಫ್ರೈ

ಬೇಕಾಗುವ ಸಾಮಗ್ರಿಗಳು

*ಬಾಂಗಡೆ ಮೀನು – ೩

 • ಚಿರೋಟಿ ರವಾ – ೧ ಕಪ್
  *ಅಚ್ಚಖಾರದ ಪುಡಿ – ೨ ಚಮಚ
  *ಧನಿಯಾ ಪುಡಿ – ೨ ಚಮಚ
  *ಕಾಳು ಮೆಣಸಿಡಿ – ೨ ಚಮಚ
  *ಹುಣಸೆರಸ – ೩ ಚಮಚ
  *ಮೊಟ್ಟೆ – ೧
  *ಹಸಿರು ಮೆಣಸಿನಕಾಯಿ – ೫
  *ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಅಚ್ಚಖಾರದ ಪುಡಿ, ಗರಂ ಮಸಾಲ, ಧನಿಯಾ ಪುಡಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹುಣಸೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಮೊಟ್ಟೆಯ ಬಿಳಿಭಾಗವನ್ನು ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಸಾಲೆಯನ್ನು ಬಾಂಗಡೆ ಮೀನಿನ ಎರಡೂ ಭಾಗದಲ್ಲಿ ಸರಿಯಾಗಿ ಹಚ್ಚಿ, ನಂತರ ಚಿರೋಟಿ ರವೆಯಲ್ಲಿ ಹೊರಳಾಡಿಸಿ ಕಾದ ಎಣ್ಣೆಯಲ್ಲಿ ಬೇಯಿಸಿ ತೆಗೆದರೆ ಫಿಶ್ ರವಾ ಫ್ರೈ ರೆಡಿ.