ಫಿಶ್ ಫ್ರೈ

ಬೇಕಾಗುವ ಸಾಮಾಗ್ರಿಗಳು
*ಮೀನು – ೧/೨ ಕೆಜಿ
*ಕೆಂಪು ಮೆಣಸಿನಕಾಯಿ ಪುಡಿ – ೧ ೧/೨ ಟೇ.ಚಮಚ
*ಅರಿಶಿಣ ಪುಡಿ- ೧ ೧/೨ ಟೇ.ಚಮಚ *ಮೆಣಸು ಪುಡಿ- ೧ ೧/೨ ಟೇ.ಚಮಚ
*ಶುಂಠಿ – ೫-೬ ತುಂಡು *ಬೆಳ್ಳುಳ್ಳಿ- ೧/೨
*ರುಚಿಗೆ ತಕ್ಕಷ್ಟು ಉಪ್ಪು *ತೆಂಗಿನ ಎಣ್ಣೆ
ಮಾಡುವ ವಿಧಾನ
ಕೆಂಪು ಮೆಣಸಿನಕಾಯಿ ಪುಡಿ, ಅರಿಶಿಣ ಪುಡಿ, ಮೆಣಸು ಪುಡಿ, ಉಪ್ಪು, ಶುಂಠಿ ಮತ್ತು ಬೆಳ್ಳುಳ್ಳಿಗಳ ಜೊತೆಗೆ ೨-೩ ಟೀ, ಚಮಚ ತೆಂಗಿನಎಣ್ಣೆ ಜೊತೆಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಇದನ್ನು ಪೇಸ್ಟ್ ರೀತಿ ಬರುವಂತೆ ರುಬ್ಬಿಕೊಳ್ಳಿ.
ಈಗ, ಈ ಮಸಾಲೆ ಪೇಸ್ಟನ್ನು ಮೀನಿನ ಮೇಲೆ ಲೇಪಿಸಿ, ಹಾಗು ೩೦ ನಿಮಿಷಗಳ ಕಾಲ ಇದು ನೆನೆಯಲು ಬಿಡಿ.
ನಂತರ, ಒಂದು ಬಾಣಲೆಯನ್ನು ತೆಗೆದುಕೊಂಡು, ಅದರ ಮೇಲೆ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ. ಇದರ ಮೇಲೆ ಮಸಾಲೆಯಲ್ಲಿ ನೆಂದ ಮೀನನ್ನು ಹಾಕಿ, ಡೀಪ್ ಫ್ರೈ ಮಾಡಿ. ಮೀನು ಹೊಂಬಣ್ಣಕ್ಕೆ ತಿರುಗುವವರೆಗು ಇದನ್ನು ಬೇಯಿಸಿ. ಈ ರುಚಿಕರವಾದ ಮೀನಿನ ಖಾದ್ಯವನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ.