ಫಿಶ್ ಫಿಂಗರ್

ಬೇಕಾಗುವ ಸಾಮಗ್ರಿಗಳು
*ಅಂಜಲ್ ಫಿಶ್ – ೧
*ಮೊಟ್ಟೆ – ೧
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಕಾಳು ಮೆಣಸಿನ ಪುಡಿ – ೧ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಮೈದಾ ಹಿಟ್ಟು – ೧ ಚಮಚ
*ಬ್ರೆಡ್ ಕ್ರಮ್ಸ್ – ೧ ಕಪ್
*ನಿಂಬೆರಸ –
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ಕರಿಯಲು

ಮಾಡುವ ವಿಧಾನ :

ಮೀನನ್ನು ಉದ್ದುದ್ದವಾಗಿ ಕಟ್ ಮಾಡಿಕೊಳ್ಳಿ. ಬೌಲ್‌ಗೆ ಕಟ್ ಮಾಡಿದ ಫಿಶ್, ಉಪ್ಪು, ಮೊಟ್ಟೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಕಾಳು ಮೆಣಸಿನ ಪುಡಿ, ಅಚ್ಚಖಾರದ ಪುಡಿ, ಮೈದಾ ಹಿಟ್ಟು ಸೇರಿಸಿ ಕಲಸಿಕೊಳ್ಳಿ. ಬ್ರೆಡ್ ಕ್ರಮ್ಸ್, ಮತ್ತು ಮೈದಾಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮೀನನ್ನು ಅದರಲ್ಲಿ ಹೊರಳಿಸಿ ಬಾಣಲಿಗೆ ಹಾಕಿ ಹೊಂಬಣ್ಣ ಬರುವವರೆಗು ಕರಿದರೆ ಫಿಶ್ ಫಿಂಗರ್ ರೆಡಿ.