ಫಿಲ್ಮ್ ಇಂಡಸ್ಟ್ರಿಯಲ್ಲಿ ನಟಿ ಶಿಲ್ಪಾ ಶೆಟ್ಟಿಯವರ ೨೭ ವರ್ಷದ ಪಯಣ: ’ನಿಕಮ್ಮಾ’ ಮತ್ತು ’ಹಂಗಾಮ-೨’ ಫಿಲ್ಮ್ ಗಳ ಜೊತೆ ಮರಳಿ ಬರುತ್ತಿದ್ದಾರೆ ಬಾಲಿವುಡ್ ಗೆ

ಈ ದಿನಗಳಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ’ಸೂಪರ್ ಡ್ಯಾನ್ಸರ್ ೪’ ಇದರ ಜಡ್ಜ್ ಆಗಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುವ ಸಿದ್ಧತೆಯನ್ನು ಮಾಡುತ್ತಿದ್ದಾರೆ.
ವರ್ಷಗಳಿಂದ ಫಿಲ್ಮೀ ಪರದೆಯಿಂದ ದೂರ ಇರುವ ಶಿಲ್ಪಾಶೆಟ್ಟಿ ಇದೀಗ ನಿಕಮ್ಮಾ ಮತ್ತು ’ಹಂಗಾಮ ೨’ ಸಿನಿಮಾಗಳ ಮೂಲಕ ವಾಪಸ್ಸು ಬರಲಿದ್ದಾರೆ.
“ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ ೪ ಇದರ ಜಡ್ಜ್ ಸೀಟಲ್ಲಿ ಕೂರುವುದೆಂದರೆ ದೊಡ್ಡ ಸವಾಲಿನ ಕೆಲಸವೂ ಹೌದು. ಇಂದು ಭಾರತ ದೇಶಾದ್ಯಂತ ಪ್ರತಿಭೆಗಳಿವೆ. ಈ ಮಕ್ಕಳ ಟ್ಯಾಲೆಂಟ್ ನೋಡಿದರೆ ನಮಗೆ ಆಶ್ಚರ್ಯ ಆಗುತ್ತದೆ. ಇವರು ಮುಗ್ಧರಷ್ಟೇ ಅಲ್ಲ, ಪ್ರತಿಭಾ ಶಾಲಿಗಳೂ ಆಗಿದ್ದಾರೆ. ಇವರಿಗೆ ನ್ಯಾಯ ದೊರಕಿಸಿಕೊಡುವ ಜೊತೆಗೆ ಇವರಲ್ಲಿ ಉತ್ಸಾಹ ಕುಗ್ಗದಂತೆ ಮಾಡುವುದೂ ನಮ್ಮ ಪ್ರಯತ್ನವಾಗಿದೆ. ಸೀಸನ್ ನಿಂದ ಸೀಸನ್ ಗೆ ಇದು ಬಹಳ ಕಠಿಣವಾದ ಕೆಲಸವೂ ಹೌದು.


ನಾನು ಓರ್ವ ಕಲಾವಿದೆ. ನೃತ್ಯ ನನ್ನ ಪ್ರಯಾಣದ ಒಂದು ಅಭಿನ್ನ ಭಾಗವಾಗಿದೆ. ನನಗೆ ನನ್ನ ಕ್ಯಾರಿಯರ್ ನಿಂದ ಯಾವ ಅನುಭವ ಆಗಿದೆಯೋ ಅದನ್ನು ಪ್ರದಾನಿಸುವ ಒಂದು ಅವಕಾಶವೂ ನನಗೆ ಇದರಿಂದ ಸಿಕ್ಕಿದೆ. ಈ ಮಕ್ಕಳ ಪ್ರದರ್ಶನದ ಜೊತೆ ನಾನೂ ಕೆಲವನ್ನು ಕಲಿಯುತ್ತೇನೆ” ಎಂದು ಶಿಲ್ಪಾ ವಿನಮ್ರವಾಗಿ ಹೇಳುತ್ತಾರೆ.
ಒಂದುರೀತಿಯಲ್ಲಿ ಶಿಲ್ಪಾಶೆಟ್ಟಿ ಬಾಲಿವುಡ್ ಗಿಂತ ಸ್ವಲ್ಪ ದೂರವೇ ಇದ್ದರೂ ಅವರ ವರ್ಚಸ್ಸು ಕಡಿಮೆಯಾಗಿಲ್ಲ .ಅವರು ಹೇಳುವಂತೆ “ನನ್ನ ಗುರಿ ಸದಾ ಸುದ್ದಿಯಲ್ಲಿರುವುದು ಅಲ್ಲ, ನನಗೆ ಪ್ರೇರಣೆ ನೀಡಿದ ವಿಷಯದ ಬಗ್ಗೆ ನಾನು ಕೆಲಸ ಮಾಡುತ್ತಾ ಇರುತ್ತೇನೆ.ದೇಶಾದ್ಯಂತ ನನ್ನ ಪ್ರಶಂಸಕರು ಇದ್ದಾರೆ.ಅದೇ ನನಗೆ ಖುಷಿಯ ಸಂಗತಿ. ಫ್ಯಾನ್ಸ್ ಗಳ ಖುಷಿಯನ್ನು ಕಂಡು ನಾನು ಧನ್ಯ ಎಂದು ತಿಳಿಯುವೆ” ಎನ್ನುತ್ತಾರೆ.
ಶಿಲ್ಪಾ ಶೆಟ್ಟಿ ಅವರು ಶಬ್ಬೀರ್ ಖಾನ್ ಅವರ ನಿಕಮ್ಮಾ ಮತ್ತು ಪ್ರಿಯದರ್ಶನ್ ಅವರ ಹಂಗಾಮ ೨ ಫಿಲ್ಮ್ ಗಳ ಮೂಲಕ ಸಿನಿಮಾರಂಗಕ್ಕೆ ವಾಪಸಾಗುತ್ತಿದ್ದಾರೆ.


ಅರ್ಥಾತ್ ಮತ್ತೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. “ನನಗೆ ನಂಬಿಕೆಯಿದೆ, ಪ್ರೇಕ್ಷಕರು ಈ ಎರಡೂ ಫಿಲ್ಮ್ ಗಳನ್ನು ಸ್ವೀಕರಿಸುತ್ತಾರೆ”ಎಂದು ಹೇಳುತ್ತಾರೆ.
೧೯೯೩ ರಲ್ಲಿ ರಿಲೀಸ್ ಆಗಿರುವ ’ಬಾಜೀಗರ್’ ಫಿಲ್ಮ್ ನ್ನು ನೋಡಿದರೆ ಇದೀಗ ಶಿಲ್ಪಾ ಶೆಟ್ಟಿ ಅವರ ಫಿಲ್ಮ್ ಬದುಕಿಗೆ ೨೭ ವರ್ಷ. “ತನ್ನ ಫಿಲ್ಮೀ ಯಾತ್ರೆಯ ಯಶಸ್ಸಿನ ಹಿಂದೆ ಯಾವ ರಹಸ್ಯ ಇದೆ ಎಂದು ನನಗೆ ತಿಳಿಯುತ್ತಿಲ್ಲ” ಎನ್ನುವ ಶಿಲ್ಪಾ ಶೆಟ್ಟಿ ಅವರು “ವಾಸ್ತವದಲ್ಲಿ ನಾನು ವಿಶ್ವಾಸ ಇರಿಸುವವಳು. ನನಗೆ ಇನ್ನೂ ಬಹಳಷ್ಟು ಕೆಲಸ ಮಾಡುವುದಿದೆ, ಮುಂದೆ ಹೋಗುವುದಿದೆ” ಎನ್ನುತ್ತಾರೆ.
ಹೆಲ್ತ್ ನ ವಿಷಯವನ್ನು ಮುಂದಿಟ್ಟರೆ ಲಕ್ಷಗಟ್ಟಲೆ ಮಹಿಳೆಯರಿಗೆ ಶಿಲ್ಪಾಶೆಟ್ಟಿ ಆದರ್ಶ. ಕೊರೊನಾ ಕಾಲದಲ್ಲಿ ಮಹಿಳೆಯರಿಗೆ ಏನು ಟಿಪ್ಸ್ ಕೊಡುತ್ತೀರಿ? ಎಂದರೆ –
“ಪ್ರತಿಯೊಬ್ಬರಲ್ಲೂ ನಾನು ಹೇಳುತ್ತೇನೆ- ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಿ. ಪ್ರತೀದಿನ ವ್ಯಾಯಾಮ ಮಾಡಿ. ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರವನ್ನು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಕೊರೊನಾ ನಮಗೆ ಫಿಟ್ನೆಸ್ ಮತ್ತು ಇಮ್ಯೂನಿಟಿ ಎರಡರ ಮಹತ್ವವನ್ನೂ ಹೇಳಿದೆ” ಎಂದು ನೆನಪಿಸುತ್ತಾರೆ.

ವಿದ್ಯುತ್ ಜಾಮವಾಲ್ ರ ನೂತನ ಪ್ರೊಡಕ್ಷನ್ ಹೌಸ್ ಆರಂಭ

ವಿದ್ಯುತ್ ಜಾಮವಾಲ್ ಅವರು ಫಿಲ್ಮ್ ಇಂಡಸ್ಟ್ರಿಗೆ ಬಂದು ಹತ್ತು ವರ್ಷಗಳು ಕಳೆಯಿತು. ಈಸಂದರ್ಭದಲ್ಲಿ ಅವರು ಅಬ್ಬಾಸ್ ಸಯ್ಯದ್ ಜೊತೆಗೂಡಿ ತನ್ನದೇ ಆದ ಪ್ರೊಡಕ್ಷನ್ ಹೌಸ್ ಲಾಂಚ್ ಮಾಡಿದ್ದಾರೆ.ಇದರ ಹೆಸರು ’ಆಕ್ಷನ್ ಹೀರೋ ಫಿಲ್ಮ್ಸ್’ ಎಂದು ಇರಿಸಿದ್ದಾರೆ.


ಕೆರಿಯರ್ ನ ಏರಿಳಿತದ ಅನುಭವ ಪಡೆದಿರುವ ವಿದ್ಯುತ್ ಅವರು ಪ್ರೊಡಕ್ಷನ್ ಹೌಸ್ ನ ಮೂಲಕ ಹೊಸ ಮುಖಗಳಿಗೆ ಅವಕಾಶವನ್ನು ನೀಡಲಿದ್ದಾರೆ.
ವಿದ್ಯುತ್ ಅವರು ಹತ್ತು ವರ್ಷಗಳ ಮೊದಲು ತೆಲುಗು ಫಿಲ್ಮ್ ’ಶಕ್ತಿ’ ಮೂಲಕ ಫಿಲ್ಮ್ ರಂಗಕ್ಕೆ ಕಾಲಿಟ್ಟಿದ್ದರು. ಅವರ ಮೊದಲ ಬಾಲಿವುಡ್ ಫಿಲ್ಮ್ ’ಫೋರ್ಸ್’ ಆಗಿತ್ತು.