ಫಿಲಿಫೈನ್ ಕ್ರೀಡಾಕೂಟಕ್ಕೆ ಸಿ.ಲಕ್ಷ್ಮಮ್ಮ

ಕೋಲಾರ,ನ.೪:ಹಿರಿಯ ಕ್ರೀಡಾಪಟು ಮೂರಾಂಡಹಳ್ಳಿ ಸಿ.ಲಕ್ಷ್ಮಮ್ಮ ಅವರು ಫಿಲಿಫೈನ್ ದೇಶದಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನಲೆಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದ ವತಿಯಿಂದ ಧನಸಹಾಯ ಮಾಡಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆ, ರಾಜ್ಯ, ದೇಶಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದರು.
ಲಕ್ಷ್ಮಮ್ಮ ಅವರು ಈಗಾಗಲೇ ಮಲೇಷಿಯಾದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿರುತ್ತಾಳೆ. ಈಗ ಫಿಲಿಫೈನ್ಸ್ ದೇಶದಲ್ಲಿ ನಡೆಯುವ ಏಷ್ಯಾದ ಓಟ ಮತ್ತು ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ದಿನಾಂಕ ೦೬-೧೧-೨೦೨೩ ರಂದು ಪ್ರಯಾಣ ಬೆಳೆಸಲಿದ್ದಾರೆ.
ಲಕ್ಷ್ಮಮ್ಮ ಅವರು ಆರ್ಥಿಕವಾಗಿ ಅಶಕ್ತರಾಗಿದ್ದರೂ ಇವರ ಕ್ರೀಡಾಸ್ಪೂರ್ತಿಗೆ ಉತ್ತೇಜನ ನೀಡುವ ಸಲುವಾಗಿ ಸಂಘದ ವತಿಯಿಂದ ೧೦,೦೦೦ ರೂಗಳನ್ನು ನೀಡಿ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಪಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಬೆಳ್ಳಾರಪ್ಪ, ನಿವೃತ್ತ ತಹಸೀಲ್ದಾರ್ ವೆಂಕಟರವಣಪ್ಪ, ವೆಂಕಟೇಶಯ್ಯ, ಮೂರಾಂಡಹಳ್ಳಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.