ಫಿಲಿಪ್ ಅಂತ್ಯಕ್ರಿಯೆಯಲ್ಲಿ ಜಾನ್ಸನ್ ಭಾಗಿಯಾಗಲ್ಲ

ಲಂಡನ್, ಏ.೧೧- ಕೊರೊನಾ ವೈರಸ್‌ನ ಕಠಿಣ ನಿಬಂಧನೆಗಳು ಇರುವ ಹಿನ್ನೆಲೆಯಲ್ಲಿ ಪ್ರಿನ್ಸ್ ಫಿಲಿಪ್ ಅವರ ಅಂತ್ಯಸಂಸ್ಕಾರದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಏಪ್ರಿಲ್ ೧೭ರಂದು ವಿಂಡ್ಸರ್ ಕ್ಯಾಶಲ್‌ನಲ್ಲಿ ಫಿಲಿಪ್ ಅವರ ಅಂತ್ಯಸಂಸ್ಕಾರದ ವಿಧಿ-ವಿಧಾನಗಳು ನಡೆಯಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿಯವರ ವಕ್ತಾರ, ಕೊರೊನಾ ವೈರಸ್‌ನ ಕಠಿಣ ನಿಬಂಧನೆಗಳು ಇರುವ ಹಿನ್ನೆಲೆಯಲ್ಲಿ ೩೦ಕ್ಕಿಂತ ಹೆಚ್ಚು ಜನರು ಒಂದೇ ಸ್ಥಳದಲ್ಲಿ ಸೇರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದಿರಲು ಅವರು ನಿರ್ಧರಿಸಿದ್ದಾರೆ. ಮುಖ್ಯವಾಗಿ ಫಿಲಿಪ್ ಅವರ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದಕ್ಕೆ ಅನುವು ಮಾಡಿಕೊಳ್ಳುವ ಸಲುವಾಗಿ ಜಾನ್ಸನ್ ಅವರು ಹಿಂದೆಸರಿದಿದ್ದಾರೆ. ಅದೂ ಅಲ್ಲದೆ ಸಾರ್ವಜನಿಕರು ಕೂಡ ಈ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ವಿಧಿಸಲಾಗಿದೆ.