ಫಿಲಂ ಫೆಸ್ಟಿವಲ್ ನಲ್ಲಿ 10 ಜನ ಪತ್ರಕರ್ತರಿಗೆ ಪ್ರಶಸ್ತಿ

ಕಲಬುರಗಿ:ಫೆ.27: ಇಲ್ಲಿನ ರಂಗಾಯಣ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನದ ಕಲಬುರಗಿ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ನಲ್ಲಿ 10 ಜನ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶನಿವಾರ ಮತ್ತು ಭಾನುವಾರ ನಡೆದ ಫಿಲಂ ಫೆಸ್ಟಿವಲ್ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತರಾದ ಜಯತೀರ್ಥ ಪಾಟೀಲ, ಸೂರ್ಯಕಾಂತ ಜಮಾದಾರ, ಮನೋಜಕುಮಾರ, ಅರುಣ ಕದಂ, ಚಂದ್ರಶೇಖರ ಕೌಲಗಾ, ಸಂಗಮನಾಥ ರೇವತಗಾಂವ, ಗೋಪಾಲ ಕುಲಕರ್ಣಿ, ಚಂದ್ರು ಹಿರೇಮಠ, ಅಕ್ರಂ ಮೊಮಿನ್, ರಮೇಶ ಮೇಳಕುಂದಿ ಅವರನ್ನು ಪ್ರಶಸ್ತಿ ಪತ್ರ ಮತ್ತು ಮೊಮೆಂಟೊ ನೀಡಿ ಸತ್ಕರಿಸಲಾಯಿತು.

ರೆಬೆಲ್ ಸ್ಟಾರ್ ಅಂಬರೀಶ್ ಅಳಿಯ ನಟ ಅಭಿಷೇಕ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಪತ್ರಕರ್ತ,ಲೇಖಕ ಮಹಿಪಾಲರೆಡ್ಡಿ ಮುನ್ನೂರ್, ಅವಿನಾಶ ಹೊಯ್ಸಳ, ಕವಿತಾ, ಸುಮ ಬೆಂಗಳೂರು, ಗುರುಶಿಷ್ಯರು ಸಿನಿ ನಿರ್ದೇಶಕ ಜಡೇಶಕುಮಾರ ಹಂಪಿ , ಸುಧಾಕರಶೆಟ್ಟಿ, ಮನೋಮಯ ಸ್ಟುಡಿಯೋಸ್ ನ ವೈಭವ ಕೇಸ್ಕರ್, ರಮೇಶ , ಗಣೇಶ್, ಸಿನಿ ಲೇಖಕ ರಾಮಕೃಷ್ಣ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.


ಫಿಲಂ ಫೆಸ್ಟಿವಲ್ ನಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ಜನರಿಗೆ ಹತ್ತಿರವಾಗುವಂತಹ ನಿಟ್ಟಿನಲ್ಲಿ ಪತ್ರಿಕೆಗಳು ಮಾಡುವ ಕಾರ್ಯ ಶ್ಲಾಘನೀಯ.

  • ಅಭಿಷೇಕ್, ನಟ.

ಕಳೆದ ಎರಡು ವರ್ಷಗಳಿಂದ ಫಿಲಂ ಫೆಸ್ಟಿವಲ್ ನಲ್ಲಿ ಮಾಧ್ಯಮದವರಿಗೆ ಸತ್ಕರಿಸುವ ಮೂಲಕ ಕಾಯಕದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಂತೆ.

  • ವೈಭವ ಕೇಸ್ಕರ್