ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ನೇತೃತ್ವದಲ್ಲಿ 50 ಮಂದಿಗೆ ವ್ಯಾಕ್ಸಿನ್

ಕಲಬುರಗಿ:ಮೇ.26: ನಗರದ ನ್ಯೂ ರಹಿಮತ್ ನಗರ ಬಡಾವಣೆಯ ಪ್ರಥಾಮಿಕ ಆರೋಗ್ಯ ಕೇಂದ್ರದಲ್ಲಿ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಅವರ ನೇತೃತ್ವದಲ್ಲಿ 50 ಮಂದಿಗೆ ವ್ಯಾಕ್ಸಿನ್ ನೀಡಲಾಯಿತು.

ಈ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ಅಪ್ತರಾದ ಆದಿಲ್ ಸೇಠ್ ಸುಲೇಮಾನಿ, ಮೊಹಮ್ಮದ್ ಶೊಹೇಬ್, ಸೂಸೈಟಿಯ ಕಾರ್ಯದರ್ಶಿ ಮೊಹ್ಮದ್ ಅಜಹರ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಹಲವರು ಇದ್ದರು.

ಈ ವೇಳೆಯಲ್ಲಿ ಅದಿಲ್ ಸೇಠ್ ಅವರು ಆರೋಗ್ಯ ಕೇಂದ್ರದ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ, ಆರೋಗ್ಯ ಕೇಂದ್ರಕ್ಕೆ ಸಿಸಿಟಿವಿ ಕ್ಯಾಮರಾ ಸೇರಿದಂತೆ ಹಲವು ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು.