ಫಿಫಿಜರ್ ಲಸಿಕೆ ‌ಶೇ.95 ರಷ್ಟು ಯಶಸ್ವಿ

ವಾಷಿಂಗ್ಟನ್, ‌ನ.18- ಅಮೆರಿಕದ ದೈತ್ಯ ‌ಔಷಧ ತಯಾರಿಕಾ ಸಂಸ್ಥೆ ಫಿಫಿಜರ್ ಅಭಿವೃದ್ಧಿ ಪಡಿಸಿರುವ ಕೊರೋನಾ ಲಸಿಕೆ ಶೇ.95 ರಷ್ಟು ಯಶಸ್ವಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ ವಾರದ ಹಿಂದಷ್ಟೇ ಲಸಿಕೆ ಶೇಕಡ 90ಕ್ಕೂ ಅಧಿಕ ಯಶಸ್ವಿಯಾಗಿದೆ ಎಂದು ಹೇಳಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೇಕಡಾ 95ರಷ್ಟು ಕೆಲಸಕ್ಕೆ ಯಶಸ್ವಿಯಾಗಿದೆ ಎಂದು ಹೇಳಿದೆ.

ಜನಸಂಖ್ಯೆಗೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಎಲ್ಲ ವಯೋಮಾನದ ಜನರ ಮೇಲೆ ಪ್ರಯೋಗ ಮಾಡಲಾಗಿದ್ದು ಅದರಲ್ಲಿ ಸಕಾರತ್ಮಕ ಫಲಿತಾಂಶ ಬಂದಿದೆ ಹೀಗಾಗಿ ಸದ್ಯದಲ್ಲೇ ಸಿದ್ಧವಾಗಲಿದೆ ಎಂದು ಫಿಫಿಜರ್ ಹೇಳಿದೆ.

ಅಂತಿಮ ಹಂತದಲ್ಲಿ 44 ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ ಅದರಲ್ಲಿ ಸಕಾರತ್ಮಕ ಫಲಿತಾಂಶ ಬಂದಿದೆ ಸಂಶೋಧನೆಗೆ ಒಳಗಾದ ಮಂದಿಯಲ್ಲಿ 65 ವರ್ಷ ದಾಟಿದ ಶೇಕಡ 94 ರಷ್ಟು ಮಂದಿ ಇದ್ದರು ಎಂದು ಸಂಸ್ಥೆ ತಿಳಿಸಿದೆ.

ಅಮೆರಿಕದಲ್ಲಿ ಅತಿಶೀಘ್ರದಲ್ಲಿ ಕೊರೋನೊ ಸೋಂಕಿಗೆ ಲಸಿಕೆ ಲಭ್ಯವಾಗಲಿದೆ ಎನ್ನುವ ಆಶಾಭಾವನೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ.

ಅಮೆರಿಕದ ಫಿಫಿಜರ್ ಸಂಸ್ಥೆ ಮತ್ತು ಬಯೋನ್ ಟೆಕ್ ಲಸಿಕೆಯನ್ನು ಜೊತೆಯಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರೋ ಜೆನಕ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ಅಂತಿಮ ಹಂತದಲ್ಲಿದೆ. ಇವುಗಳಲ್ಲಿ ಯಾವುದು ಮೊದಲು ಬರಲಿದೆ ಎನ್ನುವುದು ಕುತೂಹಲದ ಸಂಗತಿ