ಫಿಟ್‍ನೆಸ್ ಇದ್ದರೆ ರೋಗ ದೂರ

ಮೈಸೂರು,ಏ.3:- ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಹಲವು ಉದ್ದಿಮೆ ಕ್ಷೇತ್ರದಲ್ಲಿ ಶೇ 50ರಷ್ಟು ಅವಕಾಶಕ್ಕೆ ಒತ್ತಾಯಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳೊಂದಿಗೆ ಜಿಮ್ ನಡೆಸಲು ಅನುಮತಿ ನೀಡುವಂತೆ ರಾಜ್ಯ ಜಿಮ್ ಅಸೋಸಿಯೇಷನ್ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಮ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಜಿಮ್ ರವಿ ಮಾತನಾಡಿ ಸರ್ಕಾರ ಜಿಮ್ ಬಂದ್ ಮಾಡುವಂತೆ ಆದೇಶ ಮಾಡಿದೆ. ಏಕಾ ಏಕಿ ಜಿಮ್ ಬಂದ್ ಮಾಡಿದ್ರೆ ನಾವು ಏನ್ ಮಾಡೋದು. ಕಟ್ಟಡ ಬಾಡಿಗೆ ಕಟ್ಟೋಕೆ ಹಣ ಎಲ್ಲಿಂದ ತರೋದು. ಈ ಹಿಂದೆ ಸರ್ಕಾರ ಮಾಡಿದ ಆದೇಶವನ್ನು ಪಾಲನೆ ಮಾಡಿದ್ದೇವೆ. ಆದರೆ ಈಗ ಏಕಾಏಕಿ ಆದೇಶ ಮಾಡಿದೆ. ಇದನ್ನು ಸ್ವಾಗತ ಮಾಡುತ್ತೇವೆ ಆದರೆ ನಮಗೆ ಪ್ಯಾಕೇಜ್ ಘೋಷಣೆ ಮಾಡಲಿ. ನಾವು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ, ನಮ್ಮನ್ನು ಒಂದು ಉದ್ಯಮ ಎಂದು ಪರಿಗಣಿಸಿ. ಜಿಮ್ ಮಾಡಿದವರಿಗೆ ಯಾರಿಗೂ ಕೊರೋನಾ ಬಂದಿಲ್ಲ. ಪಿಟ್ ನೆಸ್ ಇದ್ದರೆ ರೋಗಗಳಿಂದ ದೂರ ಇರಬಹುದು. ಸಾಕಷ್ಟು ಜನರು ಜಿಮ್ ಮಾಡಿದ್ರೆ ಮಾತ್ರ ಊಟ ಮಾಡಲು ಸಾಧ್ಯ. ಜಿಮ್ ಕ್ರೀಡಾಪಟುಗಳು ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ಮಾಡೋಣ ಎಂದು ಕರೆಯುತ್ತಿದ್ದಾರೆ. ನಮಗೆ ಈಗಲೇ ಜನರು ಬರುತ್ತಿಲ್ಲ.
ಜಿಮ್ ಮಾಡಿದವರಿಂದ ಕೊರೋನಾ ಬಂದಿದೆ ಅಂತ ಒಂದೇ ಒಂದು ವರದಿಯಾಗಿಲ್ಲ. ಬೇರೆಯವರಿಗೊಂದು ನ್ಯಾಯ, ನಮಗೊಂದು ನ್ಯಾಯ ಅನ್ನುವಂತಾಗಿದೆ. ನಮಗೂ 50% ಅನುಮತಿ ಕೊಡಿ. ನಿಮ್ಮ ಮಾರ್ಗಸೂಚಿ ಅನುಸರಿಸುತ್ತೇವೆ. ರಾಜ್ಯದಲ್ಲಿ 10 ಸಾವಿರ ಜಿಮ್ ಗಳಿತ್ತು. ಇದರಲ್ಲಿ ಲಾಕ್ ಡೌನ್ ನಿಂದ 2 ಸಾವಿರ ಜಿಮ್ ಗಳು ಬಂದ್ ಆಗಿದೆ. ಇನ್ನು ಸಾಕಷ್ಟು ಜನರು ತುಂಬ ನಷ್ಟದಲ್ಲಿದ್ದಾರೆ ಎಂದರು