ಫಾಸ್ಟ್ ಟ್ಯಾಗ್ ಮೂಲಕ ಪ್ರತಿನಿತ್ಯ ೯೨ ಕೋಟಿ ರೂ.ಸಂಗ್ರಹ


ನವದೆಹಲಿ, ನ. ೧೨- ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಫಾಸ್ಟ್ ಟ್ಯಾಗ್ ಬಳಕೆದಾರರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ಈಗ ಪ್ರತಿನಿತ್ಯ ೨ ಕೋಟಿ ಮಂದಿ ಫಾಸ್ಟ್ ಟ್ಯಾಗ್ ಬಳಕೆ ಮಾಡುತ್ತಿದ್ದಾರೆ. ಫಾಸ್ಟ್ ಟ್ಯಾಗ್ ಮೂಲಕ ಪ್ರತಿದಿನ ೯೨ ಕೋಟಿ ರೂ. ಗಳ ಸಂಗ್ರಹವಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಂತು ಕಲುಷಿತ ಮಾಲಿನ್ಯ ಉಂಟುಮಾಡುವುದನ್ನು ತಪ್ಪಿಸಲು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಎನ್.ಹೆಚ್.ಎ.ಐ.ಜಾರಿಗೊಳಿಸಿತ್ತು.
ಟೋಲ್ ಪ್ಲಾಜಾಗಳಲ್ಲಿ ಹಣ ಪಾವತಿಗಾಗಿ ಶೇ.೧೦೦ರಷ್ಟು ಡಿಜಿಟಲ್ ವಹಿವಾಟು ನಡೆಸಲು ಸರಕಾರ ನಿರ್ದೇಶನ ನೀಡಿದ್ದು, ಫಾಸ್ಟ್ಯಾಗ್ ಅಳವಡಿಕೆಗೆ ಅಗತ್ಯ ಉತ್ತೇಜನ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಳ ದಿಟ್ಟ ಪ್ರಯತ್ನಗಳು, ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ವಹಿವಾಟು ಅಳವಡಿಕೆಯಲ್ಲಿ ಹೆಚ್ಚಳದ ಹಾದಿ ಗೆ ದಾರಿ ಮಾಡಿಕೊಟ್ಟಿವೆ’ ಎಂದು ಹೇಳಿದೆ.
ಫಾಸ್ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನವನ್ನು ಬಳಸುತ್ತದೆ, ಇದು ಬಳಕೆದಾರರಿಗೆ ಟೋಲ್ ಪ್ಲಾಜಾಗಳಲ್ಲಿ ಯಾವುದೇ ನಿರೀಕ್ಷೆ ಅಥವಾ ನಿಲುಗಡೆಯಿಲ್ಲದೆ ಒಂದು ನಯವಾದ ಮತ್ತು ಅನಾಯಾಸವಾಗಿ ಕ್ರಾಸ್-ಓವರ್ ಅನ್ನು ಒದಗಿಸುತ್ತದೆ.
ಬ್ಯಾಂಕ್ ವ್ಯಾಲೆಟ್‌ಗೆ ಲಿಂಕ್ ಆಗಿರುವ ಫಾಸ್ಟ್ಯಾಗ್ ಮೂಲಕ ಡಿಜಿಟಲ್ ರೂಪದಲ್ಲಿ ಹಣ ಪಾವತಿ ಮಾಡಲಾಗುತ್ತದೆ.