ಫಾಸ್ಟ್ ಟ್ಯಾಗ್ ಬಳಕೆ ಹೆಚ್ಚಳ

ನವದೆಹಲಿ, ನ.16- ಹೆದ್ದಾರಿಗಳ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ನಿಂದ ಸಂಗ್ರಹವಾಗುವ ಹಣದ ಪ್ರಮಾಣ ಏರಿಕೆಯಾಗಿದ್ದು ಜನ ಈಗ ಹೆಚ್ಚಾಗಿ ಫಾಸ್ಟ್ ಟ್ಯಾಗ್ ಬಳಸುತ್ತಿದ್ದಾರೆ.

ಫಾಸ್ಟ್ಯಾಗ್ ಬಳಕೆ ಕಳೆದ ಕೆಲವು ತಿಂಗಳುಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಸಾಧನವನ್ನು ಹೆಚ್ಚಿನ ಪ್ರಮಾಣದಲ್ಲಿ ವಾಹನಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಹೆದ್ದಾರಿಗಳಲ್ಲಿ ಹೆಚ್ಚಿನ ವಾಹನ ದಟ್ಟಣೆಯಿಂದ ಪಾರಾಗಲು ಹಾಗೆಯೇ ಕರೋನವೈರಸ್ ಪರಿಸ್ಥಿತಿಯಲ್ಲಿ ರೋಗ ಹರಡುವುದನ್ನು ತಡೆಯಲು ಜನ ನಗದು ಹಣ ಬಳಕೆಯನ್ನು ಕಡಿಮೆ ಮಾಡಿರುವ ಕಾರಣ ಫಾಸ್ಟಾಗ್ ಬಳಕೆ ಜಾಸ್ತಿಯಾಗಿದೆ.

ಪ್ರಸ್ತುತ, ಫಾಸ್ಟ್ಯಾಗ್ ನಿಂದ ದಿನಕ್ಕೆ ಒಟ್ಟು 92 ಕೋಟಿಗಳ ರೂಪಾಯಿಗಳ ಟೋಲ್ ಸಂಗ್ರಹವಾಗುತ್ತಿದೆ ಇದು ಒಟ್ಟು ಟೋಲ್ ಸಂಗ್ರಹದ ಮೂರನೇ ನಾಲ್ಕು ಭಾಗದಷ್ಟಿದೆ. ಕಳೆದ ವರ್ಷ ಫಾಸ್ಟ್ ಟ್ಯಾಗ್ ನಿಂದ ಇದೇ ದಿನದಲ್ಲಿ ಪ್ರತಿದಿನ 70 ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು ಈಗ ಧಿಡೀರ್ ಎಂದು ಫಾಸ್ಟ್ಯಾಗ್ ನಿಂದ ಸಂಗ್ರಹ ವಾಗುವ ಹಣ 92 ಕೋಟಿಗೆಏರಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 20 ಮಿಲಿಯನ್ ಫಾಸ್ಟ್ಯಾಗ್ ಬಳಕೆದಾರರಿದ್ದಾತತ್ವರೆ. ಟೋಲ್ ಪ್ಲಾಜಾಗಳಲ್ಲಿ ಕೇವಲ ಎರಡು ಫಾಸ್ಟ್ಯಾಗ್ ಲೇನ್‌ಗಳು ಇದ್ದವು. ಈಗ, ಅದನ್ನು ದುಪ್ಪಟ್ಟು ಗೊಳಿಸಲಾಗಿದೆ