ಫಾಸ್ಟ್ಯಾಗ್ ಅಳವಡಿಕೆ ಫೆ. ೧೫, ಗಡುವು ವಿಸ್ತರಣೆ

ನವದೆಹಲಿ, ಡಿ. ೩೧- ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ಮಾಡಿಕೊಳ್ಳುವ ಗಡುವನ್ನು ಕೇಂದ್ರದ ರಸ್ತೆ ಸಾರಿಗೆ ಸಚಿವಾಲಯ ಮತ್ತೆ ವಿಸ್ತರಿಸಿದ್ದು, ಫೆಬ್ರವರಿ ೧೫ರ ವರೆಗೆ ಫಾಸ್ಟಾಗ್ ಅಳವಡಿಕೆಗೆ ಕಾಲಾವಕಾಶ ನೀಡಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ನಗದು ಪಾವತಿಸುವ ವ್ಯವಸ್ಥೆಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಜನವರಿ ೧ರಿಂದಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕೇಂದ್ರಗಳಲ್ಲಿ ನಗದು ಪಾವತಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಫಾಸ್ಟ್ಯಗ್ ಅಳವಡಿಕೆ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ .
ಪ್ರಸ್ತುತ ಫಾಸ್ಟ್ಯಾಗ್ ಸೌಲಭ್ಯವನ್ನು ಶೇಕಡ ೭೫ ರಿಂದ ೮೦ ರಷ್ಟು ವಾಹನಗಳಿಗೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ ೧೫ ರೊಳಗೆ ಎಲ್ಲಾ ವಾಹನಗಳು ಈ ರೀತಿಯ ಸೌಲಭ್ಯವನ್ನು ಅಳವಡಿಕೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನು ಹಂತಹತವಾಗಿ ತೆಗೆದುಹಾಕಲು ಮುಂದಾಗಿರುವ ಸಚಿವಾಲಯ, ಫಾಸ್ಟ್ಯಾಗ್ ಅಳವಡಿಕೆ ಮಾಡಿಕೊಳ್ಳುವುದು ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲು ತೀರ್ಮಾನಿಸಿದೆ.
ನಗದು ಶುಲ್ಕ ಪಾವತಿಸುವುದು ಕಾನೂನಾತ್ಮಕ ಕ್ರಮವಾಗಿದ್ದರೂ ಎಲ್ಲ ವಾಹನಗಳಿಗೆ ಫಾಸ್ಟ್ಯಗ್ ಅಳವಡಿಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.