ಫಾರ್ಮಸಿ ವಿದ್ಯಾರ್ಥಿ ಕೊಲೆ: ಐವರ ಬಂಧನ

ಕಲಬುರಗಿ.ನ.7: ನಗರದ ಮಹಾತ್ಮಾ ಬಸವೇಶ್ವರ್ ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದ ಬಳಿ ಕಳೆದ ಅ. 9ರಂದು ಫಾರ್ಮಸಿ ಕಾಲೇಜು ವಿದ್ಯಾರ್ಥಿ ಸಲಾಂ ದಸ್ತಗೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಶಾಬಾಸ್, ಸೋಹೆಲ್, ನದೀಮ್, ಜುಬೇರ್ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಹಾಗೂ ಹತ್ಯೆಗೆ ಒಳಗಾದ ವಿದ್ಯಾರ್ಥಿ ಗೆಳೆಯರೇ ಆಗಿದ್ದು, ಕುಡಿದ ನಿಶೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಸಲಾಂ ದಸ್ತಗೀರ್‍ನಿಗೆ ಕೆಳಗೆ ದಬ್ಬಿದ್ದರಿಂದ ಆತ ಸಾವನ್ನಪ್ಪಿದ್ದ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚಾರಣೆ ಮುಂದುವರೆಯುತ್ತಿದೆ ಎಂದು ನಗರ ಪೋಲಿಸ್ ಉಪ ಆಯುಕ್ತ ಕಿಶೋರಬಾಬು ಅವರು ಮಾಧ್ಯಮಗಳಿಗೆ ಹೇಳಿದರು.