ಫಾರ್ಮಗೆ ಬೆಂಕಿ: 1.81 ಕೋಟಿ ನಷ್ಟ

ಮಂಡ್ಯ: ಅಶೋಕ ನಗರದ ಔಷಧಿ ಅಂಗಡಿಯಾದ ಲಕ್ಷ್ಮಿ ಫಾರ್ಮದಲ್ಲಿ ವಿದ್ಯುತ್‌ ಅವಘಡ ಸಂಭವಿಸಿ ಬೆಂಕಿಯಿಂದ 1.81 ಕೋಟಿ ಮೌಲ್ಯದ ಔಷಧಿ ಮತ್ತು ಪೀಠೋಪಕರಣಗಳು ಭಸ್ಮವಾಗಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮನೆಯ ಮಾಲೀಕ ಹಾಗೂ ಅಂಗಡಿ ಮಾಲೀಕ ಎಂ.ಪಿ.ಲೋಕಾನಂದ ಅವರಿಗೆ ಸೇರಿದ ಮನೆಯ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಏತನ್ಮಧ್ಯೆ ಭಾನುವಾರ ರಾತ್ರಿ 11 ಗಂಟೆಯಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿದೆ.


ಮಾಲೀಕ ಎಂ.ಪಿ.ಲೋಕಾನಂದ ಮಾತನಾಡಿ, ಬೆಂಕಿ ಅವಘಡ ನಡೆದ ಸಂದರ್ಭದಲ್ಲಿ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವುದಲ್ಲದೇ ಬಾರಿ ಅನಾಹುತ ತಪ್ಪಿಸಿದ್ಧಾರೆ, ಭಾನುವಾರ ರಾತ್ರಿ ನನ್ನ ಮಗನಿಗೆ ಹೊಗೆ ಬರುತ್ತಿರುವುದು ಕಂಡು ಬಂದಿದೆ. ಆ ಸಂದರ್ಭದಲ್ಲಿ ಅಗ್ನಿ ಶಾಮಕ ಠಾಣಗೆ ವಿಷಯ ಮುಟ್ಟಿಸಲಾಗಿದೆ. ನಂತರ ಬೆಂಕಿ ನಂದಿಸಿದ ಅವರು ಹೆಚ್ಚಿನ ಅನಾಹುತ ತಪ್ಪಿಸಿ ನೆರವಾದರು ಎಂದರು.
ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.