ಫಾರೂಖ್ ಶೇಖ್ ೭೩. ಮೊದಲ ಫಿಲ್ಮ್ ’ಗರಮ್ ಹವಾ’ ದಲ್ಲಿ ಹಣಪಡೆಯದೆ ಅಭಿನಯಿಸಿದ್ದರು!

ಮಾರ್ಚ್ ೨೫ ಪ್ರಖ್ಯಾತ ಫಿಲ್ಮ್ ನಟ ಫಾರೂಕ್ ಶೇಖ್ ರ ೭೩ನೇ ಜನ್ಮ ದಿನ. ಫಾರೂಕ್ ಇಂದು ನಮ್ಮ ಜೊತೆಗಿಲ್ಲ ,ಆದರೆ ಅವರ ಜನ್ಮದಿನದಂದು ಅವರ ಅಭಿಮಾನಿಗಳು ಅವರನ್ನು ನೆನಪಿಸಿಕೊಂಡಿದ್ದಾರೆ.
ಫಾರೂಕ್ ಶೇಖ್ ಸಿನಿಮಾದಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ತನ್ನ ಚಾಪು ಬೀರಿದವರು.ಅವರು ಪರದೆಯಲ್ಲಿ ನೇರ ಸರಳ ವ್ಯಕ್ತಿತ್ವದಲ್ಲಿ ಕಾಣಿಸಿಕೊಂಡಿದ್ದರು. ತನ್ನ ನಿಜ ಬದುಕಿನಲ್ಲೂ ಅವರು ಹಾಗೆಯೇ ಬದುಕಿದವರು. ಅವರು ತಮ್ಮ ಐವರು ಸಹೋದರ ಸಹೋದರಿಯರಲ್ಲಿ ದೊಡ್ಡವರು. ಅವರ ತಂದೆ ಮುಸ್ತಾಫ ಶೇಖ್ ಮುಂಬಯಿಯ ಪ್ರತಿಷ್ಠಿತ ವಕೀಲರಾಗಿದ್ದರು. ಮುಂಬೈಯ ಸೈಂಟ್ ಮೇರಿಸ್ ನಲ್ಲಿ ಅವರು ಓದಿದ್ದರು. ಆ ದಿನಗಳಲ್ಲಿ ನಾಟಕಗಳಲ್ಲಿ,, ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.


೨೫ ಮಾರ್ಚ್ ೧೯೪೮ ರಂದು ಜನಿಸಿದ ಫಾರೂಕ್ ಶೇಖ್ ೧೯೭೩ ರಲ್ಲಿ ’ಗರಮ್ ಹವಾ’ ಮೂಲಕ ತನ್ನ ಫಿಲ್ಮ್ ಬದುಕನ್ನು ಆರಂಭಿಸಿದ್ದರು. ಅನಂತರ ಅವರು ೧೯೭೭ ರಲ್ಲಿ ಬಂದ ಶತರಂಜ್ ಕೆ ಖಿಲಾಡಿ,೧೯೭೯ ರಲ್ಲಿ ಬಂದ ನೂರೀ ,೧೯೮೧ ರಲ್ಲಿ ಬಂದ ಚಶ್ಮೆ ಬದ್ದೂರ್,೧೯೮೩ ರಲ್ಲಿ ಬಂದ ಕಿಸೀ ಸೆ ನ ಕಹನಾ ದಲ್ಲಿ ಎಂದೂ ಮರೆಯಲಾರದ ಅಭಿನಯವನ್ನು ನೀಡಿದರು.
ಫಾರೂಕ್ ತನ್ನ ಮೊದಲ ಫಿಲ್ಮ್ ಗರಮ್ ಹವಾ ದಲ್ಲಿ ಹಣ ಪಡೆಯದೆ ಉಚಿತವಾಗಿ ಅಭಿನಯಿಸಿದ್ದರು. ರಮೇಶ್ ಸತ್ಯು ಅವರು ನಂತರ ಈ ಫಿಲ್ಮ್ ನಲ್ಲಿ ಅಭಿನಯಿಸಿದ ಫಾರೂಕ್ ಗೆ ೭೫೦ ರೂಪಾಯಿ ಗೌರವಧನ ನೀಡಿದ್ದರಂತೆ, ಅದು ಐದು ವರ್ಷಗಳ ನಂತರ.
ದೀಪ್ತಿ ನವಲ್ ಮತ್ತು ಫಾರೂಕ್ ಶೇಖ್ ಜೋಡಿ ಎಂಬತ್ತರ ದಶಕದಲ್ಲಿ ಬಹಳ ಹಿಟ್ಟ್ ಜೋಡಿ ಎನಿಸಿತ್ತು. ಈ ಜೋಡಿಯ ಕೊನೆಯ ಫಿಲ್ಮ್ ಲಿಸನ್ ಅಮಾಯಾ ೨೦೧೩ ರಲ್ಲಿ ಬಿಡುಗಡೆಯಾಗಿತ್ತು. ಫಾರೂಖ್ ಅವರು ೨೮ ಡಿಸೆಂಬರ್ ೨೦೧೩ ರಲ್ಲಿ ನಿಧನರಾದರು.

ಸ್ಕ್ಯಾಮ್ ೧೯೯೨ ಫಿಲ್ಮ್ ನಿಂದ ಥಲೈವೀ ತನಕ ಒಂದೇ ಟಾಪಿಕ್ ನ ಹಲವು ಫಿಲ್ಮ್ ಗಳು

ಕಂಗನಾ ರನಾವತ್ ರ ಜನ್ಮದಿನದ ಸಂದರ್ಭದಲ್ಲಿ ಥಲೈವೀ ಟ್ರೈಲರ್ ಜಾರಿಗೊಳಿಸಿದ್ದು ಈ ಫಿಲ್ಮ್ ೨೩ ಎಪ್ರಿಲ್ ಗೆ ಸಿನಿಮಾ ಟಾಕೀಸುಗಳಲ್ಲಿ ಬಿಡುಗಡೆಯಾಗಲಿದೆ. ರಾಮ್ ಗೋಪಾಲ್ ವರ್ಮಾ ಕೂಡಾ ಕಂಗನಾರ ಅಭಿನಯವನ್ನು ಪ್ರಶಂಸಿಸಿದ್ದಾರೆ.

ಇದರಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾರ ಬದುಕಿನ ಕಥೆಯಿದೆ .ಇದಕ್ಕಿಂತ ಮೊದಲು ಕೂಡಾ ಜಯಲಲಿತಾರ ಬದುಕಿನ ’ಕ್ವೀನ್’ ವೆಬ್ ಸೀರೀಸ್ ಬಂದಿದೆ.

ಇದರಲ್ಲಿ ರಮ್ಯಕೃಷ್ಣ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು .ಈ ಸೀರೀಸ್ ನ್ನು ೨೦೧೯ರಲ್ಲಿ ರಿಲೀಸ್ ಮಾಡಲಾಗಿತ್ತು.
ದ ಬಿಗ್ ಬುಲ್- ಸ್ಕ್ಯಾಮ್ ೧೯೯೨:


೨೦೨೦ ರಲ್ಲಿ ಸೋನಿಲೈವ್ ನಲ್ಲಿ ಬಂದ ಸೀರೀಸ್ ಸ್ಕ್ಯಾಮ್ ೧೯೯೨. ಇದು ಹರ್ಷದ್ ಮೆಹ್ತಾರ ಬದುಕಿನ ಆಧಾರಿತ ಫಿಲ್ಮ್ ಆಗಿತ್ತು .ಇದರಲ್ಲಿ ಪ್ರತೀಕ್ ಗಾಂಧಿ ಪ್ರಧಾನ ಪಾತ್ರದಲ್ಲಿದ್ದರು .ಯಾವ ರೀತಿ ಹರ್ಷದ್ ಮೆಹ್ತಾ ಸ್ಟಾಕ್ ಮಾರ್ಕೆಟ್ ನ ರಾಜ ಆಗಿದ್ದರು ಎನ್ನುವ ಕಥೆ ಇದರಲ್ಲಿದೆ.ಈ ಟಾಪಿಕ್ ನ ಎರಡನೇ ಫಿಲ್ಮ್ ’ದ ಬಿಗ್ ಬುಲ್’ ೮ ಎಪ್ರಿಲ್ ೨೦೨೧ಕ್ಕೆ ರಿಲೀಸ್ ಆಗಲಿದೆ. ಇದರಲ್ಲಿ ಅಭಿಷೇಕ್ ಬಚ್ಚನ್ ಹರ್ಷದ್ ಮೆಹ್ತಾರ ಪಾತ್ರದಲ್ಲಿದ್ದಾರೆ.
ಬಾಲಾ- ಉಜಡಾ ಚಮನ್:


ಆಯುಷ್ಮಾನ್ ಖುರಾನಾ, ಯಾಮಿ ಗೌತಮ್, ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಫಿಲ್ಮ್ ಬಾಲಾ ೨೦೧೯ರಲ್ಲಿ ರಿಲೀಸ್ ಆಗಿತ್ತು .ಅದೇ ವರ್ಷ ಇಂತದ್ದೇ ಕಥೆ ಇರುವ ಎರಡನೇ ಫಿಲ್ಮ್ ಒಂದೂ ಬಿಡುಗಡೆಯಾಗಿತ್ತು .ಇದರ ಹೆಸರು ಉಜಡಾ ಚಮನ್ .ಈ ಎರಡೂ ಫಿಲ್ಮ್ ಗಳ ಟಾಪಿಕ್ ಒಂದೇ ಆಗಿತ್ತು. ಹೀಗಾಗಿ ಮೇಕರ್ಸ್ ಕಿರಿಕಿರಿಗೊಂಡಿದ್ದರು.ಹಾಗೂ ಈ ಕುರಿತು ವಿವಾದವೂ ಆಗಿತ್ತು. ಕೊನೆಗೆ ಉಜಡಾ ಚಮನ್ ಫಿಲ್ಮ್ ಬಾಲಾ ಫಿಲ್ಮ್ ನ ಒಂದು ವಾರದ ಮೊದಲು ರಿಲೀಸ್ ಆಯ್ತು.
ದೇವದಾಸ್ -ದೇವ್ ಡಿ:
ಶಾರುಖ್ ,ಐಶ್ವರ್ಯ ರೈ, ಮಾಧುರಿ ದೀಕ್ಷಿತ್ ಅವರ ಫಿಲ್ಮ್ ದೇವದಾಸ್ ನ ಮೊದಲೂ ಇದೇ ಟಾಪಿಕ್ ನ ಹಲವಾರು ಫಿಲ್ಮ್ ಗಳು ಬಂದಿತ್ತು. ಮೊದಲ ಫಿಲ್ಮ್ ಕೆಎಲ್ ಸಹಗಲ್ ಅವರ ಜೊತೆ ೧೯೩೬ ರಲ್ಲಿ ಬಂದಿತ್ತು.ಎರಡನೇ ಫಿಲ್ಮ್ ನಲ್ಲಿ ದಿಲೀಪ್ ಕುಮಾರ್ ಅಭಿನಯಿಸಿದ್ದರು.ಮುಂದೆ ಶಾರುಖ್ ಖಾನ್ ಅವರ ದೇವದಾಸ್ ೨೦೦೨ ರಲ್ಲಿ ಬಂತು. ಆನಂತರ ದೇವ್ ಡಿ ಮತ್ತು ದಾಸ್ ದೇವ್ ಹೆಸರಿನ ಫಿಲ್ಮ್ ಗಳೂ ಬಂದಿತ್ತು.
ಅದೇ ರೀತಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಬದುಕಿನ ಕುರಿತಂತೆ ಆರಕ್ಕೂ ಹೆಚ್ಚು ಫಿಲ್ಮ್ ಗಳು ಬಂದಿವೆ .ಈ ಟಾಪಿಕ್ ನ ಮೊದಲ ಫಿಲ್ಮ್ ೧೯೫೪ ರಲ್ಲಿ ಬಂದಿತ್ತು. ಪಾಪುಲರ್ ರೈಟರ್ ವಿಲಿಯಂ ಶೇಕ್ಸ್ ಪಿಯರ್ ರ ರೋಮಿಯೋ ಮತ್ತು ಜೂಲಿಯೆಟ್ ಕುರಿತು ಕನಿಷ್ಠ ಎಂದರೂ ೫ ಫಿಲ್ಮ್ ಗಳು ಬಾಲಿವುಡ್ ನಲ್ಲಿ ಬಂದಿವೆ. ಕಯಾಮತ್ ಸೆ ಕಯಾಮತ್ ತಕ್ ಫಿಲ್ಮ್ ಕೂಡ ಇವುಗಳಲ್ಲಿ ಒಂದು.

ಕೊರೊನಾ ವೈರಸ್ ನ ಎರಡನೇ ಅಲೆ ಪರಿಣಾಮ: ’ಬಂಟೀ ಔರ್ ಬಬ್ಲೀ ೨’ ಫಿಲ್ಮ್ ಬಿಡುಗಡೆ ದಿನಾಂಕ ತಡೆಹಿಡಿದರು

ಕೊರೊನಾ ವೈರಸ್ ನ ಎರಡನೇ ಅಲೆಯ ದೃಶ್ಯಗಳನ್ನು ಗಮನಿಸಿ ಒಂದೊಂದೇ ಫಿಲ್ಮ್ ಗಳ ಬಿಡುಗಡೆ ದಿನಾಂಕ ಮುಂದೂಡಲ್ಪಡುತ್ತಿವೆ.


ರಾಣಾ ದಗ್ಗುಬತೀ ಅಭಿನಯದ ಹಾಥೀ ಮೇರೆ ಸಾಥೀ ಫಿಲ್ಮ್ ನ ಅನಂತರ ಇದೀಗ ಸೈಫ್ ಆಲೀ ಖಾನ್, ರಾಣಿ ಮುಖರ್ಜಿ, ಸಿದ್ಧಾಂತ ಚತುರ್ವೇದೀ ಮತ್ತು ಶರವರಿ ವಾಘ್ ಅಭಿನಯದ ಬಂಟೀ ಔರ್ ಬಬ್ಲೀ ೨ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.
ಯಶ್ ರಾಜ್ ಫಿಲ್ಮ್ಸ್ ನ ಬ್ಯಾನರ್ ನಲ್ಲಿ ಈ ಫಿಲ್ಮ್ ಎಪ್ರಿಲ್ ೨೩ರಂದು ಬಿಡುಗಡೆಯಾಗುವುದಿತ್ತು.


ಆದರೆ ವರದಿ ಅನುಸಾರ ಪ್ರೊಡಕ್ಷನ್ ಹೌಸ್ ಇದನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಎರಡನೇ ಬಾರಿ ಈ ಫಿಲ್ಮ್ ನ ದಿನಾಂಕ ಮುಂದೂಡಲ್ಪಟ್ಟಿದೆ. ವರುಣ್ ವಿ ಶರ್ಮಾ ನಿರ್ದೇಶನದ ಈ ಫಿಲ್ಮ್ ಕಳೆದ ವರ್ಷ ೨೬ ಜೂನ್ ೨೦೨೦ ಕ್ಕೆ ರಿಲೀಸ್ ಆಗಬೇಕಿತ್ತು. ಲಾಕ್ ಡೌನ್ ಕಾರಣ ಕಳೆದ ವರ್ಷ ಬಿಡುಗಡೆಯಾಗಿರಲಿಲ್ಲ.