ಫಾರೂಕ್‌ಗೆ ಕೊರೊನಾ

ಶ್ರೀನಗರ, ಮಾ. ೩೦- ಜಮ್ಮು, ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವೀಟ್‌ನಲ್ಲಿ ಪುತ್ರ ಒಮರ್ ಅಬ್ದುಲ್ ಬರೆದುಕೊಂಡಿದ್ದಾರೆ. ತಮ್ಮ ತಂದೆ ಫಾರೂಕ್ ಅಬ್ದುಲ್ ಅವರಿಗೆ ಸೋಂಕು ತಗುಲಿದೆ. ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದಿದೆ. ಪರೀಕ್ಷೆ ವರದಿ ಬರುವವರೆಗೂ ತಾವು ಮತ್ತು ನಮ್ಮ ಕುಟುಂಬದ ಎಲ್ಲ ಸದಸ್ಯರು ಕ್ವಾರಂಟೈನ್ ಇರಲಿದ್ದೇವೆ. ನಮ್ಮ ಜೊತೆ ಸಂಪರ್ಕ ಹೊಂದಿದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕಳೆದ ಫೆ. ತಿಂಗಳನಲ್ಲಿ ಫಾರೂಕ್ ಅಬ್ದುಲ್ ಅವರು ಶ್ರೀನಗರದಲ್ಲಿ ಲಸಿಕೆ ಹಾಕಿಸಿಕೊಂಡಿದ್ದರು.