ಫಾರಂ 2 ನೀಡಲು 80 ಸಾವಿರ ರೂ ಪಡೆಯುತ್ತಿದ್ದ
 ಬಳ್ಳಾರಿ ಪಾಲಿಕೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.17: ಇಲ್ಲಿನ  ಮಹಾನಗರ ಪಾಲಿಕೆಯ ಕಂದಾಯ ನಿರೀಕ್ಷಕ ಮತ್ತು ಮಧ್ಯವರ್ತಿಯೊಬ್ಬ ಫಾರಂ 2 ನೀಡಲು 80 ಸಾವಿರ ರೂ ಲಂಚ ಪಡೆಯುವಾಗ ನಿನ್ನೆ ಸಂಜೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಣ ಸಮೇತ ಬಂಧಿಸಿದ್ದಾರೆ.
ಪಾಲಿಕೆಯ ಕಂದಾಯ ನಿರೀಕ್ಷಕ   ಅಬ್ದುಲ್ ಖಾದರ್ ಮತ್ತು ಕೇಸ್ ವರ್ಕ್ ರ್   ಚಿನ್ನಯ್ಯ ಅವರು ನಿವೇಶನಕ್ಕೆ ಖಾತೆ ಫಾರಂ ನಂ.2 ಮತ್ತು 3 ನೀಡಲು ಕಳೆದ ಎರಡು ತಿಂಗಳಿಂದ ತಿರುಗಾಡಿಸಿ ಕೊಬೆಗೆ ಮಧ್ಯವರ್ತಿ  ಯೂಸಫ್ ಮೂಲಕ ದೂರುದಾರ ಕಿರಣ್ ಅವರಿಗೆ ಕೇಳಿದ್ದರಂತೆ.
ಕಿರಣ್ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು  ದಾಳಿ ನಡೆಸಿದಾಗ ಕಂದಾಯ ನಿರೀಕ್ಷಕ ಅಬ್ದುಲ್ ಖಾದರ್ ಮಧ್ಯವರ್ತಿ ಮೂಲಕ 80 ಸಾವಿರ ರೂ. ನಗದು ಪಡೆದುಕೊಂಡಾಗ ಹಣದ ಸಮೇತ ಪಾಲಿಕೆ ಲಯವಕಂದಾಯ ನಿರೀಕ್ಷಕ ಅಬ್ದುಲ್ ಖಾದರ್, ಮಧ್ಯವರ್ತಿ ಯುಸೂಫ್ ನನ್ನು ಬಂಧಿಸಿದ್ದಾರೆ.