ಫಾತ್ಮಪುರ್ ಕಳಪ್ಪೆ ಮಟ್ಟದ ಕಂಪೌಂಡ್ ಕಾಮಗಾರಿ ತನಿಖೆಗೆ ಆಗ್ರಹ

ಚಿಟ್ಟಗುಪ್ಪಾ :ಮಾ.21:ಪಟ್ಟಣ್ಣದ ವಾರ್ಡ ಸಂಖ್ಯೆ 23 ರ ಫಾತ್ಮಪುರ್ ಉರ್ದು ಶಾಲೆಯ ಗೋಡೆ ಮತ್ತು ಕಂಪೌಂಡ್ ಗೋಡೆ ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗಿದ್ದು ಕುಸಿದು ಬೀಳುವ ಸಂಭವವಿದು ಶಾಲಾ ಮಕ್ಕಳ ಜೀವಕ್ಕೆ ಅಪಾಯವಾಗುವ ಆತಂಕವಿದೆ ಕಳೆದ 2018-19 ರಲ್ಲಿ ಪುರಸಭೆಯಿಂದ ಕಂಪೌಂಡ್ ಗೋಡೆ ನಿರ್ಮಿಸಲು ಸುಮಾರು 2.59 ಲಕ್ಷ ರೂ ಗಳ ಕಾಮಗಾರಿ ಪಡೆದ ಗುತ್ತಿಗೆದಾರನ್ನು ಕಳಪೆ ಕಾಮಗಾರಿ ನಿರ್ಮಿಸಿದ್ದಾನೆ ಎಂದು ಫಾತ್ಮಪುರ್ ಜನರು ಆರೋಪಿಸಿದ್ದಾರೆ ಇದಲ್ಲದೆ ಕಂಪೌಂಡ್ ಗೋಡೆಗೆ ಸುಣ್ಣ ಬಣ್ಣ ಸಹ ಮಾಡಿರುವುದಿಲ್ಲಾ ಮುಖ್ಯವಾಗಿ
ಶಾಲೆಗೆ ಕಂಪೌಂಡ್ ಗೋಡೆ ಕುಡಿಸಿರುವುದಿಲ್ಲಾ ಇದರಿಂದಾಗಿ ಶಾಲೆಯ ಒಳಗಿನ ಆವರಣದಲ್ಲಿ ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡವಾಗಿ ಬಿಟ್ಟಿದೆ ಗಾಂಜಾ ಸೇವನೆ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದೆ ಈ ಕೂಡಲೇ ಶಾಲೆಯ ಗೋಡೆ ಮತ್ತು ಕಂಪೌಂಡ್ ಕಟ್ಟಿ ಅದಕ್ಕೆ ಸುಣ್ಣ ಬಣ್ಣ ಬಳೆದು ಕಂಪೌಂಡ್ ಗೇಟ್ ಅಳವಡಿಸಬೇಕು ಎಂದು ಮುಖಂಡ ಅಶೋಕ ಸ್ವಾಮಿ ಆಗ್ರಹಿಸಿದ್ದಾರೆ ಟೆಂಡರನಲ್ಲಿ ಗೋಡೆ ಹಾಗೂ ಸುಣ್ಣ ಬಣ್ಣದ ಪ್ರವಿಜನ್ ಸೇರಿಸಲಾಗಿದೆ ಎಂದು ಪರಿಶೀಲಿಸುತ್ತೇನೆ ಲೋಪವಾಗಿದರೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗುವುದು ಎಂದು ಪುರಸಭೆ ಮುಖಾಧಿಕಾರಿ ಶ್ರೀಪಾದ ಪುರೋಹಿತ ತಿಳಿಸಿದರು.