ಫಾಝಿಲ್‌ ಹತ್ಯೆ ಪ್ರಕರಣ: ಓರ್ವನಿಗೆ ಜಾಮೀನು  

ಮಂಗಳೂರು, ಸೆ.1೬- ಸುರತ್ಕಲ್‌ ಸಮೀಪದ ಮಂಗಳಪೇಟೆಯ ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಬಂಟ್ವಾಳದ ಹರ್ಷಿತ್‌ಗೆ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ನೀಡಿದೆ.

ಜು.28ರಂದು ರಾತ್ರಿ ಸುರತ್ಕಲ್ ಜಂಕ್ಷನ್‌ನಲ್ಲಿದ್ದ ಫಾಝಿಲ್‌ನನ್ನು ತಂಡವೊಂದು ಕೊಲೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದರು. ಆ ಪೈಕಿ ಹರ್ಷಿತ್‌ಗೆ ನ್ಯಾಯಾಲಯವು ಸೆ.7ರಂದು ಜಾಮೀನು ಮಂಜೂರು ಮಾಡಿದ್ದು, ಸೆ.13ರಂದು ಜೈಲಿನಿಂದ ಬಿಡುಗಡೆಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 28ರಂದು ರಾತ್ರಿ  ಮುಹಮ್ಮದ್ ಫಾಝಿಲ್ ಅವರು ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಭೇಟಿ ಮಾಡಿ ಅಂಗಡಿಯಿಂದ ಹೊರ‌ಬರುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೈಗೈದಿತ್ತು.