ಚಿಂಚೋಳಿ,ಸೆ.26- ನಿನ್ನೆ ಜರುಗಿದ ಜನತಾ ದರ್ಶನದಲ್ಲಿ ಚಿಂಚೋಳಿಯ ಪೆÇೀಲಪಲ್ಲಿ ಆದರ್ಶ ವಿದ್ಯಾಲಯದ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿ ಬಸ್ ವ್ಯವಸ್ಥೆ ಕಲ್ಪಿಸಲು ಕೇಳಿಕೊಂಡ ಮರುದಿನವೇ ಬಸ್ ಬಂದಿರುವುದು ವಿದ್ಯಾರ್ಥಿ ಪಾಲಕರಲ್ಲಿ ಸಂತಸವನ್ನು ತಂದಿದೆ.
ಚಿಂಚೋಳಿ ಪಟ್ಟಣದಿಂದ ತಮ್ಮ ಪೆÇೀಲಪಲ್ಲಿ ಶಾಲೆಗೆ ಬಸ್ ಓಡಿಸಬೇಕೆಂಬ ಮಾಡಿದ ಮನವಿಗೆ ಸಚಿವರು, ತಕ್ಷಣ ಸ್ಪಂದಿಸದ ಹಿನ್ನಲೆಯಲ್ಲಿ ಬಸ್ ಸ್ಥಳಕ್ಕೆ ಬಂದಿದೆ.
ವಿದ್ಯಾರ್ಥಿಳ ಅನುಕೂಲಕ್ಕೆ ಬಸ್ ಓಡಿಸುವಂತೆ ಸಚಿವರು, ಕೆ.ಕೆ.ಅರ್.ಟಿ.ಸಿ. ಎಂ.ಡಿ ಎಂ.ರಾಚಪ್ಪ ಅವರಿಗೆ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಥಳದಲ್ಲಿಯೆ ಪರಿಹಾರ ಸಿಕ್ಕಂತಾಗಿದೆ.
ಅದರಂತೆ ಮಂಗಳವಾರ ಬೆಳಿಗ್ಗೆಯ ಕೆ.ಕೆ.ಆರ್.ಟಿ.ಸಿ. ಬಸ್ ಚಿಂಚೋಳಿ ಪಟ್ಟಣದಿಂದ ಪೆÇೀಲಕಪಲ್ಲಿ ಆದರ್ಶ ವಿದ್ಯಾಲಯ ಕಾರ್ಯಾಚರಣೆ ಆರಂಭಿಸಿದೆ.
ಶಾಲೆಗೆ ಬಂದ ಬಸ್ ಕಂಡು ಮಕ್ಕಳು ಖುಷ್ ಆಗಿದ್ದಾರೆ.
ಈ ಹಿಂದೆ ಬಸ್ ಮುಖ್ಯ ರಸ್ತೆ ಮೂಲಕ ಹಾದುಹೋಗುತ್ತಿತ್ತು. ಶಾಲೆ ಮುಖ್ಯ ರಸ್ತೆಯಿಂದ ಅಂದಾಜು ಒಂದು ಕಿ.ಮೀ. ದೂರ ಇರುವುದರಿಂದ ಮಕ್ಕಳಿಗೆ ತೊಂದರೆಯಾಗಿತ್ತು.
ಪ್ರತಿ ದಿನ ಈ ಬಸ್ ಚಿಂಚೋಳಿ ಪಟ್ಟಣದಿಂದ ಬೆಳಿಗ್ಗೆ 9 ಗಂಟೆಗೆ ಆದರ್ಶ ವಿದ್ಯಾಲಯಕ್ಕೆ ಹೊರಡಲಿದೆ. ಅದೇ ರೀತಿ ಸಂಜೆ 4.15 ಗಂಟೆಗೆ ಶಾಲೆಯಿಂದ ಮಕ್ಕಳನ್ನು ತರಲು ಬಸ್ ಸಂಚರಿಸಲಿದೆ ಎಂದು ಚಿಂಚೋಳಿ ಡಿಪೆÇೀ ಮ್ಯಾನೇಜರ್ ಅಶೋಕ ಪಾಟೀಲ ಮಾಹಿತಿ ನೀಡಿದ್ದಾರೆ.