ಫಲಿತಾಂಶ ಸುಧಾರಣೆಗೆ ಗಮನಹರಿಸಿ

ಗದಗ, ಮೇ30: 2024-25 ಶೈಕ್ಷಣಿಕ ವರ್ಷದ ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಶ್ರಮವಹಿಸಿ ಕಾರ್ಯಮುಖರಾಗಿ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿರು. ಕಾಲೇಜಿನಲ್ಲಿ ಬಯೋಮೆಟ್ರಿಕ್ ಅಳವಡಿಕೆ ದಿನವಹಿ ಎರಡು ಬಾರಿ ಹಾಜರಾತಿ, ಬೆಳಗ್ಗೆ 10-30 ರಿಂದ ಮಧ್ಯಾಹ್ನ 4-30 ವರೆಗೆ ಕಾಲೇಜಿನಲ್ಲಿ ಸಿಬ್ಬಂದಿ ಕಡ್ಡಾಯವಾಗಿರಬೇಕು ಎಂದರು.

ಶೈಕ್ಷಣಿಕ ಸಾಲಿನ ಫಲಿತಾಂಶ ಸುಧಾರಣೆಗೆ ಕ್ರಮಗಳಾದ ರೆಮಿಡಿಯಲ್ ಟೀಚಿಂಗ್ ಅಳವಡಿಕೆ,ನಿರಂತರ ಬೋಧನಾ ಕಾರ್ಯ, ವರ್ಗ ಶಿಕ್ಷಕರ ನೇಮಕ ವಾರಕೊಮ್ಮೆ ವಿದ್ಯಾರ್ಥಿಗಳ ಹಾಜರಾತಿ ವಿಶ್ಲೇಷಣೆಯನ್ನು ಪಾಲಕರ ಗಮನಕ್ಕೆ ತರುಲು ತಿಳಿಸಿದರು.
ತಾಲೂಕಾ ಮಟ್ಟದ ತಪಾಸಣೆಯ ಕಮಿಟಿ ರಚನೆ,ತಾಲೂಕಾ ಕಮಿಟಿಯವರು ಪ್ರತಿ ವಾರ ಕಾಲೇಜಿಗೆ ಬೇಟಿ ನೀಡಿ ಪರಿಶೀಲನಾ ವರದಿ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಕುರ್ತಕೋಟಿ ಮಾತನಾಡಿ, ವಿಷಯ ಉಪನ್ಯಾಸಕರು ಕ್ರೀಯಾಯೋಜನೆ ತಯಾರಿ, ಪಾಠ ಟಿಪ್ಪಣಿ, ಡೈರಿ ಬರವಣಿಗೆ ಸೇರಿದಂತೆ ಎಲ್ಲಾ ಹಂತದ ಪರೀಕ್ಷೆಗಳು, ಮೌಲ್ಯಮಾಪನ ಕಾರ್ಯ ನಿರ್ದಿಷ್ಟ ಅವಧಿಯಲ್ಲಿ ಮುಗಿಸಿ ಅಂಕಗಳ ದಾಖಲಿಸುವುದು ಸದರಿ ಮಾಹಿತಿ ಪಾಲಕರ ಗಮನಕ್ಕೆ ತರಬೇಕು ಮತ್ತು ಕಾಲೇಜಿನ ಚಲನವಲನ ರಜಿಸ್ಟರ್ ನಲ್ಲಿ ಕಡ್ಡಾಯ ಸಹಿ ಹಾಕುವುದು ಜೊತೆಗೆ ಕಡ್ಡಾಯವಾಗಿ ಸಮಯಪಾಲನೆಯೊಂದಿಗೆ ಕಾರ್ಯ ನಿರ್ವಹಿಸಲು ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಸೇರಿದಂತೆ ವಿವಿಧ ಕಾಲೇಜಿನ ಪ್ರಾಚಾರ್ಯರು ಹಾಜರಿದ್ದರು