ಫಲಾನುಭವಿ ಆಯ್ಕೆ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಲು ಸಚಿವ ಶಿವರಾಜ ಎಸ್. ತಂಗಡಗಿ ಗಡುವು

ಕಲಬುರಗಿ,ಆ.28: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಗಮಗಳಲ್ಲಿ ಹಿಂದಿನ ವರ್ಷ ಸೇರಿದಂತೆ ಪ್ರಸಕ್ತ 2023-24ನೇ ಸಾಲಿನ ಫಲಾನುಭವಿ ಆಯ್ಕೆಯನ್ನು ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣಗೊಳಿಸಬೇಕೆಂದು ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಹಾಗೂ ಸಚಿವ ಶಿವರಾಜ ಎಸ್. ತಂಗಡಗಿ ಅಧಿಕಾರಿಗಳಿಗೆ ಗಡುವು ನೀಡಿದರು.
ಸೋಮವಾರ ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಇಲಾಖೆ ವ್ಯಾಪ್ತಿಯ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹಿಂದಿನ ವರ್ಷದ ಗುರಿಯನ್ನು ಇದೂವರೆಗೆ ಸಾಧಿಸದಿದ್ದಕ್ಕೆ ಸಿಡಿಮಿಡಿಗೊಂಡ ಸಚಿವರು, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸುವತ್ತ ಅಧಿಕಾರಿಗಳು ಮುಂದಾಗಬೇಕು ಎಂದರು.
ಫಲಾನುಭವಿ ಆಯ್ಕೆ ವಿಚಾರದಲ್ಲಿ ಶಾಸಕರು ಆಯ್ಕೆ ಪಟ್ಟಿ ಅಂತಿಮಗೊಳಿಸಿಲ್ಲ ಎಂದು ಹೇಳುವುದನ್ನು ಒಪ್ಪುವುದಿಲ್ಲ. ಶಾಸಕರಿಗೆ ಹತ್ತಾರು ಕೆಲಸ ಇರುತ್ತೆ. ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಆಯ್ಕೆ ಅಂತಿಮಗೊಳಿಸಬೇಕು ಎಂದು ವಿಭಾಗದ ಎಲ್ಲಾ ನಿಗಮದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ ಮಾತನಾಡಿ, ಬಿ.ಸಿ.ಎಂ. ನಿಗಮಕ್ಕೆ ಸಾಲ ಸೌಲಭ್ಯ ಕೋರಿ ಬರುವವರಿಗೆ ಕಲಬುರಗಿ ಕಚೇರಿಯಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಕೊಡಲ್ಲ. ನಿಗಮವು ಸಾಲ ನೀಡಲು ಸತಾಯಿಸಿದರೆ ಬಡ ಜನರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಆಗ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ಬಡ ಜನರ ಕಲ್ಯಾಣಕ್ಕೆ ನಿಗಮ ಸ್ಥಾಪಿಸಿದೆ. ನಿಮಗೆ ಕಾರು, ಕಚೇರಿ, ಸಂಬಳ ನೀಡಲಾಗುತ್ತಿದೆ. ಬಡವರ ಕಲ್ಯಾಣ ಮಾಡದಿದ್ದರೆ ನೀವಿದ್ದು ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
2023-24ನೇ ಸಾಲಿಗೆ ಗಂಗಾ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಅನುದಾನ 2.50 ಲಕ್ಷ ರೂ. ಗಳಿಂದ 3.25 ಲಕ್ಷ ರೂ.ಗೆ ನಮ್ಮ ಸರ್ಕಾರ ಹೆಚ್ಚಿಸಿದೆ. ಕೊಳವೆ ಬಾವಿ ಕೊರೆದು ನವೆಂಬರ್ ತಿಂಗಳ ಒಳಗೆ ನೀರು ಹರಿಸಬೇಕು. ಇನ್ನು ಸಚಿವರು ತಮ್ಮ ತವರು ಕ್ಷೇತ್ರ ಕನಕಗಿರಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಇನ್ನು ಅನುμÁ್ಟನವಾಗದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಒಂದು ಕೆಲಸ ಮಾಡಿ, ಇಲ್ಲ ಶಿಸ್ತು ಕ್ರಮಕ್ಕೆ ಎದುರಾಗಿ ಎಂದು ತಾಲೂಕಾ ಅಧಿಕಾರಿ ಕರೆಪ್ಪ ಅವರಿಗೆ ಎಚ್ಚರಿಕೆ ನೀಡಿದಲ್ಲದೆ ಮುಂದಿನ 15 ದಿನದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಗಂಗಾ ಕಲ್ಯಾಣ ಯೋಜನೆಗಳನ್ನು ಪೂರೈಸಬೇಕು ಎಂದು ಸೂಚನೆ ನೀಡಿದರು.
ಕಲಬುರಗಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಅದು ಬಳಕೆಗೆ ಬಾರದೆ ಹಾಳುಬಿದ್ದಿದೆ. ಇಲಾಖೆಯ ವಶಕ್ಕೆ ಪಡೆದು ಸಮುದಾಯ ಸೇವೆಗೆ ನೀಡಬೇಕು ಎಂದು ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ ಸಚಿವರ ಗಮನಕ್ಕೆ ತಂದರು. ಸಚಿವ ಶಿವರಾಜ್ ಎಸ್. ತಂಗಡಗಿ ಮಾತನಾಡಿ, ಕೂಡಲೆ ಲೋಕೋಪಯೋಗಿ ಅಧಿಕಾರಿಗಳಿಂದ ಕಟ್ಟಡ ವಶಕ್ಕೆ ಒಡೆದು ಸುಣ್ಣ-ಬಣ್ಣ ಮಾಡಿ ಜಿಲ್ಲಾ ಉಸ್ತುವಾರಿ ಗಮನಕ್ಕೆ ತಂದು ಲೋಕಾರ್ಪಣೆಗೊಳಿಸಬೇಕು. ಅಲ್ಲದೆ ವಿಭಾಗದಲ್ಲಿ ವಿಧಾನಸಭೆ ಕ್ಷೇತ್ರವಾರು ಬಾಕಿ ಉಳಿದುಕೊಂಡಿರುವ ಸಮುದಾಯ ಭವನಗಳ ಮಾಹಿತಿ ಕೊಡಿ ಎಂದರು.
ಚಿತ್ತಾಪುರ ಅರಸು ಭವನಕ್ಕೆ ಬಾಕಿ 50 ಲಕ್ಷ ರೂ. ಶೀಘ್ರ ಬಿಡುಗಡೆ: ಸಮುದಾಯ ಭವನ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭವನಕ್ಕೆ ಬಾಕಿ 50 ಲಕ್ಷ ರೂ. ಬಿಡುಗಡೆಯಾಗದ ಕಾರಣ ಕೆಲಸ ಅರ್ಧಕ್ಕೆ ಸ್ಥಗಿತಗೊಂಡಿರುವುದನ್ನು ಅರಿತ ಸಚಿವ ಶಿವರಾಜ್ ಎಸ್. ತಂಗಡಗಿ ಬೆಂಗಳೂರು ಹೋಗಿದ ತಕ್ಷಣವೇ ಬಾಕಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು. 6 ತಿಂಗಳಿನಲ್ಲಿ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಎಂದು ಸೂಚಿಸಿದರು.

ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಿ: ಹಿಂದುಳಿದ ವರ್ಗಗಳ ಇಲಾಖೆ ಚರ್ಚೆ ವೇಳೆಯಲ್ಲಿ ವಸತಿ ನಿಲಯದಲ್ಲಿ ಗುಣಮಟ್ಟದ ಆಹಾರ ಪೂರೈಸಬೇಕು. ನಿಲಯದಲ್ಲಿ ಶುಚಿತ್ವ ಕಾಪಾಡಬೇಕು. ಆಗಾಗ ಮಕ್ಕಳ ಅರೋಗ್ಯ ತಪಾಸಣೆಗೆ ಒಳಪಡಿಸಬೇಕು. ಫಲಿತಾಂಶ ಸುಧಾರಣೆಗೂ ಆದ್ಯತೆ ನೀಡಬೇಕು. ವಸತಿ ನಿಲಯದಲ್ಲಿ ಮಂಜೂರಾತಿ ಸಂಖ್ಯೆಗ್ಗಿಂತ ಹೆಚ್ಚಿದಲ್ಲಿ ಬಾಡಿಗೆ ಪಡೆಯಿರಿ. ವಸತಿ ನಿಲಯ ಅಭಿವೃದ್ಧಿ ಸಮಿತಿ, ಪೆÇೀಷಕರ ಸಮಿತಿ ಮಾಸಿಕ ನಡೆಸಿ ಅವರ ಸಲಹೆ ಪಡೆಯಿರಿ. ವಸತಿ ನಿಲಯಕ್ಕೆ ಆಗಾಗ ಭೇಟಿ ನೀಡಿ, ಮಕ್ಕಳೊಂದಿಗೆ ಊಟ ಸೇವಿಸಿ. ವಸತಿ ನಿಲಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಲಭ್ಯವಿದ್ದಲ್ಲಿ ಕೂಡಲೆ ಮಾಹಿತಿ ಕೊಡಿ. ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಅನುದಾನ ದೊರಕಿಸಿಕೊಡಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಸಕ ತಿಪ್ಪಣಪ್ಪ ಕಮಕನೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಊರು ಬಿಟ್ಟು ವಸತಿ ನಿಲಯ ಸ್ಥಾಪಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಅಭದ್ರತೆ ಕಾಡುತ್ತಿದೆ. ಗ್ರಾಮ, ಪಟ್ಟಣದಲ್ಲಿಯೇ ಶಾಲೆ, ವಸತಿ ನಿಲಯ ಸ್ಥಾಪಿಸಿದಲ್ಲಿ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿ.ಕೆ.ಜಗದೀಶ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಎಂ.ಡಿ.ಕಾಂತರಾಜ್, ಜನರಲ್ ಮ್ಯಾನೇಜರ್ (ಹಣಕಾಸು) ಪಂಚಲಿಂಗ ಸ್ವಾಮಿ, ಮರಾಠಾ ಅಭಿವೃದ್ಧಿ ನಿಗಮದ ಎಂ.ಡಿ.ಪ್ರಕಾಶ ಪಾಘೋಜಿ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಎಂ.ಡಿ. ಭಾವನಾ, ಶ್ರೀನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಎಂ.ಡಿ. ಗೀತಾ ಎಲ್.ಆರ್, ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್.ಮಧೂಸೂಧನ ಸೇರಿದಂತೆ ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾ ಬಿ.ಸಿ.ಎಂ. ಅಧಿಕಾರಿಗಳು, ನಿಗಮಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.