ಫಲಾನುಭವಿಗಳ ಸಮಾವೇಶ


ಲಕ್ಷ್ಮೇಶ್ವರ,ಮಾ.13: ಪಟ್ಟಣದ ಪುರಸಭೆಯ ಉಮಾ ವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ಗ್ಯಾರಂಟಿ ಫಲಾನುಭವಿಗಳ ಬೃಹತ್ ಸಮಾವೇಶ ಜರುಗಿತು.
ಸಮಾವೇಶಕ್ಕೆ ಸಸಿಗೆ ನೀರೆರೆಯುವ ಮೂಲಕ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ ಎಲ್ ವೈಶಾಲಿ ಅವರು ಚಾಲನೆ ನೀಡಿದರು.
ಬಳಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಗಣಿ ಮತ್ತು ಖನಿಜ ನಿಗಮದ ಅಧ್ಯಕ್ಷರು ರೋಣದ ಶಾಸಕರಾದ ಜಿಎಸ್ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಐದು ಗ್ಯಾರಂಟಿಗಳು ರಾಜ್ಯದ ಬಡವರ ಪಾಲಿನ ಕಲ್ಪವೃಕ್ಷವಾಗಿದೆ ಎಂದು ಹೇಳಿದವರು ಈ ಯೋಜನೆಗಳು ರಾಜ್ಯದ ಪ್ರತಿಯೊಬ್ಬ ಬಡಜನರ ಪಾಲಿಗೆ ತಲುಪಿದೆಯೋ ಇಲ್ಲವೋ ಎಂಬುದನ್ನು ಅರಿಯಲು ಈ ಸಮಾವೇಶವನ್ನು ಪ್ರತಿ ತಾಲೂಕಿನಲ್ಲೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮುಖ್ಯಮಂತ್ರಿಗಳು ರಾಜ್ಯದ ಬಡವರ ಪರ ಚಿಂತನೆ ಹೊಂದಿದ್ದು ಅಭಿವೃದ್ಧಿ ಕುಂಠಿತವಾದರೂ ರಾಜ್ಯದ ಬಡಜನರು ನೆಮ್ಮದಿಯ ಬದುಕು ಸಾಗಿಸಲು ಚುನಾವಣಾ ಪೂರ್ವದಲ್ಲಿಯೇ ಘೋಷಿಸಿದ ಐದು ಗ್ಯಾರಂಟಿಗಳನ್ನು ಈಗಾಗಲೇ 38,000 ಕೋಟಿ ಖರ್ಚು ಮಾಡಿ ತಲುಪಿಸಲಾಗಿದೆ. ಯೋಜನೆಗಳನ್ನು ಜಾರಿಗೆ ತಂದಾಗ ವಿರೋಧ ಪಕ್ಷಗಳು ಸರ್ಕಾರ ದಿವಾಳಿಯಾಗುತ್ತದೆ ಎಂದು ಗುಲ್ಲು ಆದರೆ ಈಗ ಅಭಿವೃದ್ಧಿಯ ಜೊತೆಗೆ ಬಡ ಜನರಿಗೆ ಯೋಜನೆ ತಲುಪಿಸುತ್ತಿರುವುದು ಮುಖ್ಯಮಂತ್ರಿ ಅವರ ಬದ್ಧತೆಗೆ ಅವರ ಬಡವರ ಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿಎಸ್ ಗಡ್ಡದೇವರ ಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ತಹಶೀಲ್ದಾರ್ ವಾಸದೇವ್ ವಿ ಸ್ವಾಮಿ ಶಿರಹಟ್ಟಿ ತಶಿಲ್ದಾರ್ ಅನಿಲ ಕೆ ಬಡಿಗೇರ್ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರ್ಕೃಷ್ಣಪ್ಪ ಶಿರಹಟ್ಟಿ ತಾಲೂಕು ನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೆಕಾರ್ ಲಕ್ಷ್ಮೇಶ್ವರ ತಾಲೂಕ ಪಂಚಾಯಿತಿ ಆಡಳಿತ ಅಧಿಕಾರಿ ಜಗದೇವ್ ಬಿ ಶಿರಹಟ್ಟಿ ತಾಲೂಕ ಪಂಚಾಯಿತಿ ಆಡಳಿತ ಅಧಿಕಾರಿ ಎನ್ಕೆ ನಿರ್ಮಲಾ ಲಕ್ಷ್ಮೇಶ್ವರ ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ್ ಶಿರಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಿದ್ದರಾಯ ಕಟಿ ಸೇರಿದಂತೆ ಲಕ್ಷ್ಮೇಶ್ವರ ಪುರಸಭೆ ಮತ್ತು ಶಿರಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
ಈಶ್ವರ್ ಮೆಡ್ಲೇರಿ ಮತ್ತು ನಿಂಗಪ್ಪ ಓಲೆಕಾರ್ ವಾಸದೇ ವ ಸ್ವಾಮಿ ಮತ್ತು ಅನಿಲ್ ಬಡಿಗೇರ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಎಲ್ಲ ಇಲಾಖೆಗಳ ಸಿಬ್ಬಂದಿ ವರ್ಗದವರು ಮುಖ್ಯಸ್ಥರು ಹಾಜರಿದ್ದರು