ಫಲಾನುಭವಿಗಳ ಮನೆ ಮನೆ ಸಂಪರ್ಕ ಮಾಡಿದ ಕೇಂದ್ರ ಸಚಿವ ಭಗವಂತ ಖೂಬಾ

ಬೀದರ:ಮಾ.1:ಫಲಾನುಭವಿಗಳ ಸಂಪರ್ಕ ಅಭಿಯಾನದಡಿ, ಕೇಂದ್ರ ಸಚಿವರು ಹಾಗೂ ಸಂಸದರಾದ ಭಗವಂತ ಖೂಬಾರವರು ಹಾಗೂ ಪಕ್ಷದ ಪ್ರಮುಖರು ಸೇರಿ, ಬೀದರ ಶಿವನಗರ ದಕ್ಷೀಣದಲ್ಲಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಹಾಯ ಪಡೆದ ಫಲಾನುಭವಿಗಳ ಮನೆ ಮನೆಗೆ ತೆರಳಿ, ಫಲಾನುಭವಿಗಳಿಗೆ ಕರಪತ್ರಗಳು ನೀಡಿ, ಮೋದಿ ಗ್ಯಾರಂಟಿಯ ಸ್ಟೀಕರ್ ಅಂಟಿಸಿದರು.

 ಮೋದಿ ಸರ್ಕಾರದಿಂದ ದೇಶದ 81 ಕೋಟಿ ಜನರು ವಿವಿಧ ಯೊಜನೆಗಳಡಿ ಫಲಾನುಭವಿಗಳಾಗಿದ್ದಾರೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಫಲಾನುಭವಿಗಳಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಫಲಾನುಭವಿಗಳಿಗೆ ಭೇಟಿ ಮಾಡಿ, ಕೇಂದ್ರದ ಯೋಜನೆಯಡಿ ಲಾಭ ಪಡೆದಿರುವ ಬಗ್ಗೆ ಖಾತರಿ ಪಡಿಸಿಕೊಂಡು, ಪಕ್ಷದ ಸರಳ್ ಅಪ್ಲಿಕೇಶನ್ ಅಲ್ಲಿ ಅಪ್ಲೋಡ್ ಮಾಡಿದರು.
ಜನರೊಂದಿಗೆ ಮಾತನಾಡಿ, ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಸಮರ್ಥ ನಾಯಕತ್ವದಡಿ, ದೇಶವು ಉನ್ನತ್ತಿಯತ್ತ ಸಾಗುತ್ತಿದೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು. ಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಮೂರನೆ ಬಾರಿಗೆ ಆಶೀರ್ವಾದಿಸಿ, ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಆಶಿರ್ವಾದ ಮಾಡಬೇಕೆಂದು ಜನರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾದ ಪ್ರದೀಪ ಕಾಡಾದಿ, ಜಿಲ್ಲಾ ಸಂಚಾಲಕರಾದ ದಿನೇಶ ಮೂಲಗೆ ಹಾಗೂ ಪ್ರಮುಖರಾದ ನೀತಿನ ಕರ್ಪೂರ, ಗೋಪಾಲ, ಸೂರ್ಯಕಾಂತ ರಾಮಶೇಟ್ಟಿ, ಶರಣಪ್ಪ ಪಂಚಾಕ್ಷರಿ ಮುಂತಾದವರು ಉಪಸ್ಥಿತರಿದ್ದರು.