ಫಲಾನುಭವಿಗಳಿಗೆ ಪರಿಹಾರದ ಚೆಕ್‌ ವಿತರಿಸಿದ ಶಾಸಕ ಭಟ್‌

ಬ್ರಹ್ಮಾವರ, ಮೇ ೩೦- ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 3 ಕುಟುಂಬಗಳಿಗೆ ಶಾಸಕ ಕೆ.ರಘುಪತಿ ಭಟ್ ಶಿಫಾರಸಿನ ಮೇರೆಗೆ ಮಂಜೂರಾದ 97,305 ರೂ. ಮೊತ್ತದ ಚೆಕ್ ನಿನ್ನೆ ಫಲಾನುಭವಿ ಗಳಿಗೆ ವಿತರಿಸಲಾಯಿತು.

ಕೆಂಜೂರು ಗ್ರಾಮದ ಬುಡ್ಡು ಹಾಂಡ್ತಿ ಅವರಿಗೆ 52,305 ರೂ., ಕುದಿ ಗ್ರಾಮದ ವಿಜಯ ಅವರಿಗೆ 15,000 ರೂ. ಹಾಗೂ ಪೆಜಮಂಗೂರು ಗ್ರಾಮದ ಕೆ.ಜಯಲಕ್ಷ್ಮಿ ಬಾಯಿ ಅವರಿಗೆ 30,000ರೂ. ಮೊತ್ತದ ಚೆಕ್‌ಗಳನ್ನು ಶಾಸಕ ರಘುಪತಿ ಭಟ್ ವಿತರಿಸಿದರು. ಈ ಸಂದರ್ಭದಲ್ಲಿ ಕಳ್ತೂರು ಗ್ರಾಪಂ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷ ನವೀನ್ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ಆದರ್ಶ ಶೆಟ್ಟಿ, ದಿನೇಶ್ ಶೆಟ್ಟಿ, ರಮಾನಂದ ಶೆಟ್ಟಿ ಮತ್ತು ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ ಮೊದ ಲಾದವರು ಉಪಸ್ಥಿತರಿದ್ದರು.