ಫಲಾನುಭವಿಗಳಿಗೆ ತಲುಪದ ಸರ್ಕಾರದ ಯೋಜನೆಗಳು; ಆರೋಪ

ಜಗಳೂರು.ನ.೧೬; ಸಾಮಾಜಿಕ‌ ಭದ್ರತಾ ಯೋಜನೆಗಳು ಸೂಕ್ತ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು  ತಾಲೂಕು ಆಡಳಿತ  ಯಂತ್ರ ಕುಸಿತವಾಗಿರುವುದಕ್ಕೆ ಇದಕಿಂತ ಮತ್ತೊಂದು ಉದಾಹರಣೆಗೆ ಇಲ್ಲ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಆರೋಪಿಸಿದರು .                                              ತಾಲ್ಲೂಕಿನ ಚಿಕ್ಕ ಬನ್ನಿಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು ಇಪತ್ತಕ್ಕು ಹೆಚ್ಚು ಮಯೋವೃದ್ದ ವಿದವೆಯರು ಸಂಧ್ಯಾಸುರಕ್ಷ ಹಾಗು ವಿದವಾ ವೇತನಕ್ಕೆ ಆಗ್ರಹಿಸಿ ನೆಡಸಿದ ಪ್ರತಿಬಟನ ಸ್ಥಳಕ್ಕೆ ಆಗಮಿಸಿ‌ ಮಹಿಳೆಯರನ್ನ  ಕುರಿತು ಮಾತನಾಡಿದರು. ಇಡೀ ಕ್ಷೇತ್ರದಲ್ಲಿ ಅಧಿಕಾರಿಗಳು ತಮ್ಮ ಇಲಾಖೆ ಕೆಲಸ ಮಾಡುತ್ತಿಲ್ಲ ಕೆಲ ಅಧಿಕಾರಿಗಳು ಜನರ ಬಳಿ ಹೋಗುತ್ತಿಲ್ಲ ಸಣ್ಣ ಪುಟ್ಟ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಗೆ ದಿನ ನಿತ್ಯ ಅಲೆಯುವಂತಾಗಿದೆ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾಗುವ ವಿಧವಾ ವೇತನ.ಸಂಧ್ಯಾ ಸುರಕ್ಷಾ.ಮನಸ್ವಿನಿ.ವೃದ್ದಾಪ್ಯ ವೇತನಗಳು ಸೂಕ್ತ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಇಂತಹ ಸಮಸ್ಯೆ ಪ್ರತಿ ಗ್ರಾಮದಲ್ಲೂ ಕೇಳಿಬರುತ್ತಿದೆ ಆಗಾದರೆ ಅದಿಕಾರಿಗಳು ಏನು ಕೆಲಸ ಮಾಡುತ್ತಾರೆ ಎಂದು ಪ್ರೆಶ್ನಿಸಿದರು ಚಿಕ್ಕಬನ್ನಿಹಟ್ಟಿ ಗ್ರಾಮ ಒಂದೇ ಅಲ್ಲ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಪಲಾನುಭವಿಗಳ ಬ್ಯಾಂಕ್ ಖಾತೆಗೆ ವೇತನ ಬರುವಂತೆ ನಿಗಾ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು . ಫಲಾನುಭವಿ ಚಂದ್ರಮ್ಮ ಮಾತನಾಡಿ ವಿಧವಾ ವೇತನ ತಿಂಗಳಿಗೆ ಸರಿಯಾಗಿ ಬರುವುದಿಲ್ಲ ಚಿಕ್ಕ ಬನ್ನಿಹಟ್ಟಿ ಗ್ರಾಮದಲ್ಲಿ ವೇತನ ನೀಡಲ್ಲ ನಮಗೆ ಸಹಿ ಮಾಡಲು ಬಂದರೂ ಸಹ ಹೆಬ್ಬೆಟ್ಟು ಹಾಕಿಸಿಕೊಂಡು ಒಂದು ತಿಂಗಳು ವೇತನ ನೀಡಿ ಮೂರು ನಾಲ್ಕು ತಿಂಗಳ ವೇತನ ನೀಡದೇ ಸಬೂಬು ಹೇಳಿ ಹೋಗುತ್ತಾರೆ ಹೀಗೆ ಸುಮಾರು ಇಪ್ಪತ್ತೈದು ವಯೋವೃದ್ದ ಮಹಿಳೆಯರಿಗೆ ವಂಚಿಸಿದ್ದಾರೆ ನಮಗೆ ವೇತನ ಕೊಡಿಸಿ ಎಂದು ಅದಿಕಾರಿಗಳನ್ನ ಒತ್ತಾಯಿಸಿದರು.     ಶಿರೆಸ್ತಾದಾರ್ ರಾಮಚಂದ್ರಪ್ಪ ಮಾತನಾಡಿ ಕಂದಾಯ ಇಲಾಖೆಯಿಂದ ಅಂಚೆ ಇಲಾಖೆ ಖಾತೆಗೆ ಹಣ ವರ್ಗಾವಣೆ ಗೊಲಿಸಿದ್ದೇವೆ ತಾಂತ್ರಿಕ ಕಾರಣಗಳಿಂದ ತಡವಾಗಿರಬಹುದು ಮತ್ತೊಮ್ಮೆ ಇಂತಹ ನಿರ್ಲಕ್ಷೆ ಮಾಡದಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರುಈ ವೇಳೆ ಡಿ.ಎಸ್.ಎಸ್.ಮುಖಂಡರಾದ ಜೆ.ಎಚ್.ಶಂಭುಲಿಂಗಪ್ಪ. ಗೌರಿಪುರ ಸತ್ಯಮೂರ್ತಿ . ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಟಿ.ತಿಪ್ಪೇಸ್ವಾಮಿ. ಚಿಕ್ಕಮ್ಮನಹಟ್ಟಿ ಕಾಟಪ್ಪ  ಗೋಪ ಗೊಂಡನಹಳ್ಳಿ ಶಿವಮೂರ್ತಿ ಬುಳ್ಳೇನಹಳ್ಳಿ ನಾಗರಾಜ್ ಲಿಂಗಣ್ಣನಹಳ್ಳಿ ಅಜ್ಜಪ್ಪ.ಸೇರಿದಂತೆ ಚಿಕ್ಕಬನ್ನಿಹಟ್ಟಿ ಮಹಿಳೆಯರು ಗ್ರಾಮಸ್ಥರು ಇದ್ದರು.