
ನಗರದ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಅಲಂಕೃತಗೊಂಡಿರುವ ಚಿತ್ರವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸುತ್ತಿರುವ ಸಾರ್ವಜನಿಕರು.
ಬೆಂಗಳೂರು, ಆ.೬- ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಸ್ವಾತಂತ್ರೋತ್ಸವದ ಫಲಪುಷ್ಪ ಪ್ರದರ್ಶನದ ಮೂರನೇ ದಿನವಾದ ಭಾನುವಾರ ಲಾಲ್‌ಬಾಗ್ ಉದ್ಯಾನದತ್ತ ಜನಸಾಗರವೇ ಹರಿದು ಬಂತು.ಶುಕ್ರವಾರ ಹಾಗೂ ಶನಿವಾರಗಳಿಗೆ ಹೋಲಿಸಿದರೆ ಭಾನುವಾರ ವೀಕ್ಷಕರ ಪ್ರಮಾಣ ಹೆಚ್ಚಾಗಿದ್ದು, ಉದ್ಯಾನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡಿ ಹಸಿರು ಸಿರಿಯನ್ನು ಕಣ್ತುಂಬಿಕೊಂಡರು.ಈ ಬಾರಿ ೨.೫ ಕೋಟಿ ವೆಚ್ಚದಲ್ಲಿ ಫ್ಲವರ್ ಶೋ ನಡೆಯುತ್ತಿದ್ದು, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ವಿಧಾನಸೌಧ ಮಾದರಿ ೭.೨ ಲಕ್ಷ ವಿವಿಧ ತಳಿಯ ಪುಷ್ಪಗಳಲ್ಲಿ ಕಂಗೊಳಿಸುತ್ತಿದೆ. ಅದರ ಮುಂಭಾಗದಲ್ಲಿ ಕೆಂಗಲ್ ಹನುಮಂತಯ್ಯ ಅವರ ೧೪ ಅಡಿ ಎತ್ತರದ ಪ್ರತಿಮೆಯು ನೋಡುಗರನ್ನು ಸೆಳೆಯುತ್ತಿದ್ದು, ಇಲ್ಲಿ ಎದುರು ನಿಂತು ಜನ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಗಾಜಿನ ಮನೆಯಲ್ಲಿ ಸಾಲುಗಟ್ಟಿ ನಿಂತಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು.ಬೆಳಿಗ್ಗೆ ೯ರಿಂದ ೧೧ ಗಂಟೆಯವರೆಗೆ ಹಾಗೂ ಸಂಜೆ ೫ರಿಂದ ೬ಗಂಟೆಯವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಜನ ಭೇಟಿ ನೀಡಿದರು.
ಪ್ರದರ್ಶನದಲ್ಲಿ ಬಗೆ ಬಗೆಯ ಗುಲಾಬಿ ಹೂಗಳು, ಆಂಥೋರಿಯಂ ಹೂಗಳು, ಜರ್ಬೇರಾ, ಆರ್ಕಿಡ್, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್‌ಹಾಟ್ ಪೋಕರ್, ಆಲ್?ಸ್ಟೋರೇಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧರಾಜ ಸೇರಿದಂತೆ ಶೀತ ವಲಯದ ಹೂಗಳು ಕಣ್ಮನ ಸೆಳೆಯುತ್ತಿವೆ.
ಇನ್ನೂ, ಈ ಬಾರಿ ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿ ಫಲಕಗಳ ಮೂಲಕ ಜನರಿಗೆ ತಿಳಿಸಿಕೊಡಲಾಗುತ್ತಿದೆ.
ಪ್ರಮುಖವಾಗಿ ಹೂವಿನ ರಾಶಿಯಲ್ಲಿ ಅರಳಿರುವ ವಿಧಾನಸೌಧ, ಶಿವಪುರದ ಸತ್ಯಾಗ್ರಹ ಸೌಧದ ಮಾದರಿಯನ್ನು ವೀಕ್ಷಿಸಲು ಜನರು ಸಾಲು ಗಟ್ಟಿ ನಿಂತಿದ್ದರು.
ರಸ್ತೆಗಳಲ್ಲಿ ನಿಂತ ವಾಹನಗಳು..!
ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗಾಗಿ ಡಾ.ಮರೀಗೌಡ ರಸ್ತೆಯ ಅಲ್ ಅಮೀನ್ ಕಾಲೇಜು ಅವರಣದಲ್ಲಿ ದ್ವಿಚಕ್ರ ವಾಹನಗಳಿಗೆ, ಕೆ.ಹೆಚ್ ರಸ್ತೆಯ ಶಾಂತಿನಗರ ಬಸ್ ನಿಲ್ದಾಣದ ಪಾರ್ಕಿಂಗ್?ನಲ್ಲಿ ನಾಲ್ಕು ಚಕ್ರದ ವಾಹನಗಳು, ಮರಿಗೌಡ ರಸ್ತೆಯ ಹಾಪ್ ಕಾಮ್ಸ್?ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸ್ಥಳಾವಕಾಶವನ್ನು ಮಾಡಿಕೊಡಲಾಗಿದೆ. ಆದರೆ, ಈ ಕುರಿತು ಮಾಹಿತಿ ಇಲ್ಲದೆ ವಾಹನ ಸವಾರರು ಲಾಲ್?ಬಾಗ್?ಗೆ ಆಗಮಿಸುತ್ತಿದ್ದು, ಉದ್ಯಾನವನದ ಸುತ್ತಮುತ್ತಲ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗಿದ್ದರಿಂದ ಸಾಮಾನ್ಯ ಜನ ಪರದಾಡುವಂತಾಗಿತ್ತು.
ಗಮನ ಸೆಳೆದ ಕೆಂಗಲ್? ಹನುಮಂತಯ್ಯ ಪ್ರತಿಮೆ..!
೪ ಅಡಿ ಎತ್ತರದ ಪೀಠದ ಮೇಲೆ ೧೪ ಅಡಿ ಎತ್ತರದ ಬೃಹತ್ ಹೂವಿನ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ವಿಶೇಷ ಆಕರ್ಷಣೆಯಾಗಿದೆ. ಇನ್ನಳಿದು, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸುತ್ತಿವೆ.
ಟಿಕೆಟ್ ದರ..!
ಫಲಪುಷ್ಪ ಪ್ರದರ್ಶನಕ್ಕೆ ಟಿಕೆಟ್ ನಿಗದಿ ಮಾಡಲಾಗಿದ್ದು, ವಯಸ್ಕರಿಗೆ ವಾರದ ದಿನಗಳಲ್ಲಿ ೭೦ ರೂಪಾಯಿ ಹಾಗೂ ವಾರದ ಕೊನೆಯಲ್ಲಿ ೮೦ ರೂಪಾಯಿ ಹಾಗೂ ಮಕ್ಕಳಿಗೆ ೩೦ ರೂಪಾಯಿ ಇದೆ. ಜೊತೆಗೆ ಶಾಲಾ ಮಕ್ಕಳು ಶಾಲೆಯ ಯೂನಿಫಾರ್ಮ್ ಹಾಗೂ ಐಡಿ ಕಾರ್ಡ್ ಜೊತೆಗೆ ಬಂದರೆ ಉಚಿತ ಪ್ರವೇಶ ಪಡೆಯಬಹುದು.