ಫರ್ಟಿಲೈಸರ್ ಮಳಿಗೆಗಳ ಕೃಷಿ ಅಧಿಕಾರಿಗಳ ದಾಳಿ

ಶಹಾಪುರ:ನ.21:ರೈತರಿಗೆ ಮತ್ತು ಕೃಷಿ ಭೂಮಿಗೆ ಮಾರಕವಾಗಿ ಕಾಡುತ್ತಿರುವ ಅನಧಿಕೃತ ಕ್ರಿಮಿನಾಶಕಗಳ ಕುರಿತಾಗಿ ಶಹಾಪುರದಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ ಬ್ಲೂಮ್ ಫೆÇ್ಲೀವರ್, ಸಿಕ್ಸರ್, ಬಲವಾನ್, ಹೀಗೆ ಹಲವಾರು ಕ್ರಿಮಿನಾಶಕಗಳ ಕುರಿತಾಗಿ ಮಾದ್ಯಮಗಳಲ್ಲಿ ವದರಿ ಪ್ರಸಾರವಾದ ನಂತರ ನಗರದಲ್ಲಿ ಕೃಷಿ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಸಹಾಯಕ ನಿರ್ದೇಶÀಕರು ಹಾಗೂ ಇಲಾಖೆಯ ಸಿಬ್ಬಂದಿಗರು 2 ದಿನಗಳಲ್ಲಿ 21 ಆಗ್ರೋಗಳ ಮಳಿಗೆಗಳಿಗೆ ದಾಳಿ ಮಾಡಿ 13 ಮಾರಾಟ ತಡೆ ಆದೇಶ ನೀಡಿಲಾಗಿದ್ದು 3 ಮಳಿಗೆಗಳಿಗೆ ಕಾರಣ ಕೀಳುವ ನೋಟಿಸ್ ಆದೇಶ ನೀಡಲಾಗಿದೆ. ಹಾಗೆಯೆ ಸಂಗಮೇಶ್ವರ ಆಗ್ರೋ ಏಜನ್ಸಿ, ಪಾಟೀಲ್ ಟ್ರೇಡರ್ಸ್ ಮಾರಾಟ ಮಳಿಗೆಗಳ ಪರವಾನಿಗೆ ರದ್ದತಿಗೆ ಶಿಫಾರಸ್ಸು ಮಾಡಲಾಗಿದೆ ಜೊತೆಗೆ ಕೆಲವೊಂದು ಮಳಿಗೆಗಳಲ್ಲಿ ಸಿಕ್ಕ 6 ನೋಂದಣಿಯಾಗದ ಕೀಟನಾಶಕಗಳ ಮಾದರಿಯನ್ನು ತೆಗೆದು ಕೀಟನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಗೌತಮ ಅವರು ಸಂಜೆವಾಣಿಗೆ ತಿಳಿಸಿದ್ದಾರೆ