ಫರೂಖಿಯಾ ಕಾಲೇಜು ಹರಾಜು ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ

ಮೈಸೂರು,ನ.14: ಫರೂಖಿಯಾ ಕಾಲೇಜು ಹರಾಜು ಪ್ರಕ್ರಿಯೆಯನ್ನು ವಿರೋಧಿಸಿ ಅಖಿಲ ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ವತಿಯಿಂದ ಪ್ರತಿಭಟನೆ ನಡೆಯಿತು.
ಫರೂಖೀಯಾ ವುಮೆನ್ಸ್ ಪಾಲಿಟೆಕ್ನಿಕ್ ಕಾಲೇಜು ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರಿಫಾ ಉಲ್ ಮುಸ್ಲಿಮಿನ್ ಎಜುಕೇಷನ್ ಟ್ರಸ್ಟ್ (ಫರೂಖಿಯಾ ಎಜುಕೇಷನ್ ಸಂಸ್ಥೆಗಳು)ಮುಸ್ಲಿಂ ಜನಾಂಗದ ಹೆಸರು ಬಳಸಿಕೊಂಡು ವಿದ್ಯಾಸಂಸ್ಥೆ ನಡೆಸಿಕೊಂಡು ಬರುತ್ತಿದ್ದು ಈ ವಿದ್ಯಾಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ ಮೈಸೂರು ಸಿಟಿ ಉದಯಗಿರಿ ಮಹದೇವಪುರ ಮುಖ್ಯರಸ್ತೆಯಲ್ಲಿರುವ ಸ್ವತ್ತಿನ ಸಂಖ್ಯೆ ಎ ಮತ್ತು ಎ-14ರಲ್ಲಿ ಪೂರ್ವ-ಪಶ್ಚಿಮ 500 ಅಡಿಗಳು ದಕ್ಷಿಣೋತ್ತರ 150/2 ಅಡಿ ನಿವೇಶನ ಹಾಗೂ ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಬೆಲವತ್ತ ಗ್ರಾಮದ ಸರ್ವೆ ನಂಬರ್ 93/2ರಲ್ಲಿ 4ಎಕರೆ ಜಮೀನನ್ನು ಖರೀದಿಸುವ ಸಲುವಾಗಿ ಕೆನರಾ ಬ್ಯಾಂಕ್ ಮೈಸೂರು ಇಲ್ಲಿಂದ ಕೋಟ್ಯಾಂತರ ರೂ.ಸಾಲ ಪಡೆದುಕೊಂಡಿದ್ದು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡದಿರುವುದರಿಂದ ಸ್ವತ್ತು ಖರೀದಿಸಲು ಬ್ಯಾಂಕಿನಿಂದ ಪಡೆದಿದ್ದ ಸಾಲಕ್ಕೆ ಅಡಮಾನ ಮಾಡಿದ್ದ ಫರೂಖಿಯಾ ಕಾಲೇಜನ್ನು ಹರಾಜು ಪ್ರಕ್ರಿಯೆ ನಡೆಸಲು ಆದೇಶವಾಗಿರುವುದರಿಂದ ಸಾವಿರಾರು ಮಂದಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವುದರಿಂದ ಹಾಗೂ ಮುಸ್ಲಿಂ ಜನಾಂಗದ ಹೆಸರಿಗೆ ಕಳಂಕ ಬರುವುದರಿಂದ ಕೂಡಲೇ ಸಾಲ ಮರುಪಾವತಿಗೆ ಕ್ರಮ ವಹಿಸುವಂತೆ ಒತ್ತಾಯಿಸಿದರು.